ರಿಷಭ್ ಪಂತ್ ಆಟಕ್ಕೆ ಬಾಲಿವುಡ್ ನಟಿಯ ಮೆಚ್ಚುಗೆ : ಡೆಲ್ಲಿ ಬ್ಯಾಟ್ಸಮನ್ ಹೇಳಿದ್ದೇನು..?

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಎಡಗೈ ಆರಂಭಿಕ ಬ್ಯಾಟ್ಸಮನ್ ರಿಷಭ್ ಪಂತ್ ಈ ಬಾರಿಯ ಐಪಿಎಲ್ ನಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ. 2018 ಐಪಿಎಲ್ ನಲ್ಲಿ 12 ಇನ್ನಿಂಗ್ಸ್ ಗಳನ್ನಾಡಿರುವ ರಿಷಭ್ ಪಂತ್, ಡೆಲ್ಲಿ ಪರವಾಗಿ 582 ರನ್ ಗಳಿಸಿ ಆರೇಂಜ್ ಕ್ಯಾಪ್ ರೇಸ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮೇ 10 ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ, ಸನ್ ರೈಸರ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರಿಷಭ್ ಪಂತ್ ಭರ್ಜರಿ ಶತಕ ಬಾರಿಸಿದ್ದರು. 63 ಎಸೆತಗಳನ್ನು ಎದುರಿಸಿದ್ದ ಪಂತ್, 15 ಬೌಂಡರಿ ಹಾಗೂ 7 ಸಿಕ್ಸರ್ ಗಳ ನೆರವಿನಿಂದ 128 ರನ್ ಗಳಿಸಿದ್ದರು.

Image result for rishabh pant 128

ರಿಷಭ್ ಪಂತ್ ಬ್ಯಾಟಿಂಗ್ ಕುರಿತು ‘ಪ್ಯಾರ್ ಕಾ ಪಂಚ್ ನಾಮಾ’ ಸಿನೆಮಾ ಖ್ಯಾತಿಯ ಬಾಲಿವುಡ್ ನಟಿ ನುಷ್ರತ್ ಭರೂಚಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ನುಷ್ರತ್, ‘ 63 ಬಾಲ್ ನಲ್ಲಿ 128 ರನ್, ವಾಟ್ ಅ ಗೇಮ್ ರಿಷಭ್ ಪಂತ್, ನಿಮ್ಮ ಬ್ಯಾಟಿಂಗ್ ನೋಡಲು ಅಪಾರ ಆನಂದವಾಗುತ್ತಿದೆ. ನಿಮ್ಮ ಇನ್ನಿಂಗ್ಸ್ ಮತ್ತೊಮ್ಮೆ ನೋಡಬೇಕೆನ್ನಿಸಿ, ಹೈಲೈಟ್ಟ್ ನೋಡಿದೆ ‘ ಎಂದು ಹಾಡಿ ಹೊಗಳಿದ್ದಾರೆ.

Image result for nushrat bharucha

ನಟಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ರಿಷಭ್ ಪಂತ್ ಟ್ವೀಟ್ ಮಾಡಿ ‘ಥ್ಯಾಂಕ್ಯೂ’ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com