IPL : ಕುತೂಹಲ ಮೂಡಿಸಿದ Play-off ರೇಸ್ : ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೇಳೋದೇನು..?

ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಸೀಸನ್ ಪ್ರಾರಂಭಗೊಂಡು 5 ವಾರಗಳ ಸಮಯ ಕಳೆದಿದ್ದು, ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು ತಂಡಗಳ ನಡುವಿನ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ.

12 ಪಂದ್ಯಗಳಲ್ಲಿ 9 ರಲ್ಲಿ ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಈಗಾಗಲೇ ತನ್ನ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. 12 ಮ್ಯಾಚ್ ಗಳನ್ನಾಡಿ 8 ರಲ್ಲಿ ಜಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ.

Image result for play off race IPL 2018

ಉಳಿದ ಎರಡು ಸ್ಥಾನಗಳಿಗಾಗಿ, KKR, RR, MI, KXIP ಹಾಗೂ RCB ಈ ಎಲ್ಲ 5 ತಂಡಗಳು ಹೋರಾಟ ನಡೆಸುತ್ತಿವೆ. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕ್ರಮವಾಗಿ 3ನೇ ಮತ್ತು 4ನೇ ಸ್ಥಾನದಲ್ಲಿವೆ. ಹೀಗಾಗಿ ಮುಂದಿನ ಎಲ್ಲ ಪಂದ್ಯಗಳೂ ಆಯಾ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿವೆ. ಗೆಲುವು ದಾಖಲಿಸುವುದು ಮಾತ್ರವಲ್ಲ, ರನ್ ರೇಟ್ ಮೇಲೆಯೂ ತಂಡಗಳು ಗಮನ ಹರಿಸುವ ಅಗತ್ಯವಿದೆ.

ಮುಂಬೈ ಇಂಡಿಯನ್ಸ್ ಉತ್ತಮ ರನ್ ರೇಟ್ ಹೊಂದಿದೆ. ಕಿಂಗ್ಸ್ ಇಲೆವನ್ ಪಂಜಾಬ್ ರನ್ ರೇಟ್ ಕೊರತೆಯಿಂದ ಟೂರ್ನಿಯಿಂದ ಹೊರಬೀಳುವ ಭೀತಿಯನ್ನು ಎದುರಿಸುತ್ತಿದೆ.

  • ರಾಯಲ್ ಚಾಲೆಂಜರ್ಸ್ ಮುಂದಿನ ಎರಡೂ ಪಂದ್ಯಗಳನ್ನು SRH & RR ವಿರುದ್ಧ ಗೆಲ್ಲಲೇಬೇಕಿದೆ. ಗುರುವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್ಸೀಬಿ ಸೋತರೆ ಪ್ಲೇ ಆಫ್ ಕನಸು ಭಗ್ನಗೊಳ್ಳಲಿದೆ.
  • ಬುಧವಾರ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದರೆ ಮಾತ್ರ ಪ್ಲೇ ಆಫ್ ರೇಸ್ ನಲ್ಲಿ ಉಳಿಯಲಿದೆ. ಒಂದು ವೇಳೆ KXIP ಗೆದ್ದರೆ, ಪಂಜಾಬ್ ತಂಡ ಪ್ಲೇ ಆಫ್ ತಲುಪುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಾಗಲಿವೆ.
  • ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಹಂತಕ್ಕೇರಲು, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ವಿರುದ್ಧ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ.

ಡೆಲ್ಲಿಯನ್ನು ಹೊರತು ಪಡಿಸಿ, ಉಳಿದ ಯಾವ ತಂಡ ಬೇಕಾದರೂ ಪ್ಲೇ ಆಫ್ ತಲುಪುವ ಸಾಧ್ಯತೆಗಳಿದ್ದು, ಐಪಿಎಲ್ ಟೂರ್ನಿಯ ಕೊನೆಯ ಹಂತ ರೋಚಕತೆಯನ್ನು ಸೃಷ್ಟಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com