ಆಪರೇಷನ್ ‘ಹೊಲಸ’ನ್ನು ಹಿಮ್ಮೆಟ್ಟಿಸೋಣ : ಪ್ರಜಾಸತ್ತೆಯನ್ನು ಉಳಿಸೋಣ

ಆತ್ಮೀಯ ಬಂಧುಗಳೇ,

ಧಾರ್ಮಿಕ ದುರಭಿಮಾನಿ, ಜಾತಿವಾದ, ಹಣದ ಚೆಲ್ಲಾಟ ಹಾಗೂ ಮಾಧ್ಯಮದ ದುರ್ಬಳಕೆಯ ನಂತರವೂ ಸರ್ಕಾರ ರಚಿಸಲು ಬೇಕಾದ ಸಂಖ್ಯೆಯನ್ನು ಪಡೆಯುವಲ್ಲಿ ವಿಫಲಗೊಂಡಿರುವ ಬಿಜೆಪಿ ಕಪಟ ಮಾರ್ಗಗಳನ್ನೆಲ್ಲಾ ಬಳಸಿ ಅಧಿಕಾರ ಕಬಳಿಸಲು ಶಕುನಿ ರಾಜಕಾರಣವನ್ನು ಆರಂಭಿಸಿದೆ. ರಾಜ್ಯಪಾಲರ ಹುದ್ದೆಯನ್ನು ತನ್ನ ದುರಾಸೆಗೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಶೇ 56ಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದಿರುವ ಹಾಗೂ 116ರಷ್ಟು ಸೀಟುಗಳನ್ನು ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ಸರ್ಕಾರ ರಚಿಸಲು ಅವಕಾಶ ನೀಡದೆ ಕುದುರೆ ವ್ಯಾಪಾರಕ್ಕೆ ಸಮಯ ಖರೀದಿಸಿದೆ. ಈ ಕೊಳಕು ರಾಜಕಾರಣವನ್ನು ನಾವು ಒಗ್ಗೂಡಿ ಪ್ರತಿಭಟಿಸಬೇಕಿದೆ. ರಾಜ್ಯಪಾಲರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವಂತೆ ಒತ್ತಾಯಿಸಬೇಕಿದೆ.

ನಾವು ಮಾಡಬೇಕಿರುವ ತುರ್ತು ಕೆಲಸಗಳು:

1.     ಸಾಮಾಜಿಕ ಜಾಲತಾಣಗಳಲ್ಲಿ ಈ ನೀಚ ರಾಜಕಾರಣದ ವಿರುದ್ಧ ತೀವ್ರ ಪ್ರಚಾರಂದೋಲನವನ್ನು ಆರಂಭಿಸಬೇಕು. ಬಿಜೆಪಿಯ ಡಬಲ್ ಗೇಮನ್ನು ಬಯಲುಗೊಳಿಸಬೇಕು.

2.     ನಾಳೆ ಎಲ್ಲಾ ಕಡೆ ಪತ್ರಿಕಾ ಗೋಷ್ಠಿಗಳನ್ನು ನಡೆಸಬೇಕು ಮತ್ತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಜನಾಗ್ರಹ ಪತ್ರವನ್ನು ಕಳುಹಿಸಿಕೊಡಬೇಕು. ಪತ್ರಿಕಾ ಹೇಳಿಕೆ ಮತ್ತು ಜನಾಗ್ರಹ ಪತ್ರದ ಕರಡು ಪ್ರತಿಯನ್ನು ಇಂದು ರಾತ್ರಿ ಕಳುಹಿಸಿಕೊಡಲಾಗುವುದು.

3.     ಇಂದು ಸಂಜೆ 5 ಗಂಟೆಗೆ ಟೌನ್ ಹಾಲ್ ಎದುರುಗಡೆ ಪ್ರಜಾತಂತ್ರವಾದಿಗಳಿಂದ ಪ್ರತಿಭಟನೆ.

4.     ನಾಳೆ ಬೆಳಿಗ್ಗೆ ಸ್ವಾತಂತ್ರ್ಯ ಸೇನಾನಿ ಹೆಚ್. ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿ ಮತ್ತು ಪತ್ರಿಕಾ ಗೋಷ್ಠಿ.

5.     ರಾಜ್ಯಪಾಲರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳದಿದ್ದಲ್ಲಿ ರಾಜ್ ಭವನ್ ಚಲೋಗೆ ಕರೆ.

ಕರ್ನಾಟಕವನ್ನು ಕೊಳಕು ರಾಜಕಾರಣದಿಂದ ಕಾಪಾಡಲು ಎಲ್ಲರೂ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿ ಆಗ್ರಹಪೂರ್ವಕ ಮನವಿ.

ರಾಜಕೀಯ ಕ್ರಿಯಾ ಸಮಿತಿ, ಸಂವಿಧಾನ ಉಳಿವಿಗಾಗಿ ಕರ್ನಾಟಕ.

One thought on “ಆಪರೇಷನ್ ‘ಹೊಲಸ’ನ್ನು ಹಿಮ್ಮೆಟ್ಟಿಸೋಣ : ಪ್ರಜಾಸತ್ತೆಯನ್ನು ಉಳಿಸೋಣ

Leave a Reply

Your email address will not be published.

Social Media Auto Publish Powered By : XYZScripts.com