ಗೆದ್ದ EVM : ರಾತ್ರೋ ರಾತ್ರಿ ಮತ್ತೆ ಜಯ ಸಾಧಿಸಿದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ !

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್  ಶೆಟ್ಟರ್ ಕೊನೆಗೂ ಗೆಲುವು ಸಾಧಿಸಿದ್ದಾರೆ.

ಮಂಗಳವಾರ ನಡೆದ ಮತದಾನದ ವೇಳೆ ಇವಿಎಂ ಮಷೀನ್‌ನಲ್ಲಿದ್ದ ಮತಗಳು ಹಾಗೂ ವಿವಿ ಪ್ಯಾಟ್‌ನಲ್ಲಿ ತೋರಿಸಿದ್ದ ಮತಗಳ ಅಂತರದಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದ್ದು, ಈ ಸಂಬಂಧ ಶೆಟ್ಟರ್‌ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ಮಹೇಶ್ ನಲವಾಡ ಅವರು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಜಗದೀಶ್ ಶೆಟ್ಟರ್‌ ಅವರ ಗೆಲುವಿಗೆ ತಡೆ ನೀಡಿದ್ದರು. ಬಳಿಕ ಎಲ್ಲವನ್ನು ಪರಿಶೀಲನೆ ನಡೆಸಿದ್ದು ರಾತ್ರೋ ರಾತ್ರಿ ಜಗದೀಶ್‌ ಶೆಟ್ಟರ್ ಅವರ ಗೆಲುವನ್ನು ಘೋಷಣೆ ಮಾಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಮತ ಏಣಿಕೆ ಕೇಂದ್ರದ ಬಳಿ ಚುನಾವಣಾಧಿಕಾರಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com