ವಿಜಯೋತ್ಸವ ಆಚರಣೆ ವೇಳೆ ಮಾರಾಮಾರಿ : ಕಾಂಗ್ರೆಸ್ಸಿಗರಿಗೆ ಚಾಕು ಇರಿದ ಬಿಜೆಪಿ ಕಾರ್ಯಕರ್ತರು

ದಾವಣಗೆರೆ : ನಿನ್ನೆ ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆ  ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದ್ದು, ಕಾಂಗ್ರೆಸ್‌ ಕಾರ್ಯಕರ್ತರಿಗೆ ಚಾಕು ಇರಿಯಲಾಗಿದೆ.

ದಾವಣ ಗೆರೆಯ ಹೊನ್ನಾಳಿ ನಗರದ ಮಹಾಲಕ್ಷ್ಮಿ ಸರ್ಕಲ್‌ನಲ್ಲಿ ನಿನ್ನೆ ರೇಣುಕಾಚಾರ್ಯ ಗೆದ್ದದ್ದಕ್ಕೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ ಮಂಜಪ್ಪ ನಿವಾಸದ ಎದುರು ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಹೊಡೆದಾಟ ನಡೆದಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಕಾಂಗ್ರೆಸ್‌ ಕಾರ್ಯಕರ್ತ ರಾಜು ಗುಡ್ಡಜ್ಜಿ , ಸಿದ್ಧೇಶ್‌ ಎಂಬುವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.  ಇವರಿಬ್ಬರಿಗೂ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಹೊನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published.