ಯಾರಿಗೂ ಅಧಿಕಾರ ಬಿಟ್ಟುಕೊಡಲೊಪ್ಪದ ಬಿಜೆಪಿಯ ನೆಕ್ಸ್ಟ್‌ಮಾಸ್ಟರ್‌ ಪ್ಲಾನ್‌ ಏನು…..?

ಇತ್ತೀಚಿನ ಮಾಹಿತಿಯ ಪ್ರಕಾರ ರಾಜ್ಯಪಾಲರ ಕಚೇರಿಯಿಂದ ಆದೇಶವೊಂದು ಹೊರಬಿದ್ದಿದ್ದು ನಾಳೆ ಪ್ರಮಾಣವಚನಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂಬಂತಹ ಸಂದೇಶ ರವಾನೆಯಾಗಿರುವುದಾಗಿ ತಿಳಿದುಬಂದಿದೆ. ಆದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದರ ಬಗ್ಗೆ ಮಾತ್ರ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.

ಬುಧವಾರ ಬೆಳಗ್ಗಿನಿಂದ ನಡೆದ ರಾಜಕೀಯ ಗೊಂದಲ, ಆರೋಪ, ಪ್ರತ್ಯಾರೋಪ, ಪೀಕಲಾಟಗಳು ಇದನ್ನೆಲ್ಲ ನೋಡುತ್ತಿದ್ದರೆ, ಬಿಜೆಪಿಯಾಗಲಿ, ಜೆಡಿಎಸ್‌-ಕಾಂಗ್ರೆಸ್‌ ಆಗಲಿ ಅಧಿಕಾರ ಬಿಟ್ಟುಕೊಡುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ. ಈಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ರೆಸಾರ್ಟ್‌ ರಾಜಕೀಯದ ಮೊರೆ ಹೋಗಿರುವುದರಿಂದ ಯಾವ ಶಾಸಕರನ್ನೂ ಸೆಳೆಯಲು ಸಾಧ್ಯವಾಗುತ್ತಿಲ್ಲ.

ಆದರೆ ಯಾರಿಗೂ ಅಧಿಕಾರ ಬಿಟ್ಟುಕೊಡಲೊಪ್ಪದ ಬಿಜೆಪಿಯ ಮುಂದೆ ಇನ್ನೂ ಒಂದು ಅವಕಾಶವಿದ್ದು, ಬಹುಮತ ಸಾಬೀತು ಪಡಿಸುವ ವೇಳೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ನಾಯಕರು ಗೈರಾದರೆ ಆಗ ಬಿಜೆಪಿಗೆ ಅನುಕೂಲವಾಗಲಿದೆ. ಒಂದು ವೇಳೆ ಸರ್ಕಾರ ರಚನೆಗೆ ಮೈತ್ರಿ ಸರ್ಕಾರಕ್ಕೆ ಅವಕಾಶ ನೀಡಿದ್ದೇ ಆದರೆ ಬಿಜೆಪಿ ಈ ತಂತ್ರ ಅನುಸರಿಸುವ ಸಾಧ್ಯತೆ ಇದೆ. ಈಗಾಗಲೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ 112 ಸಂಖ್ಯಾಬಲದ ಅಗತ್ಯವಿದೆ. ಆದರೆ ಮೈತ್ರಿ ಮಾಡಿರುವ ಪಕ್ಷಗಳ ಬಳಿ 117 ಸಂಖ್ಯಾಬಲವಿದ್ದು, 6ಜನ ಬಹುಮತ ಸಾಬೀತಿನ ದಿನ ಗೈರಾದರೂ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಶಾಸಕರು ಗೈರಾಗುವಂತೆ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published.