ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಮ್ಯಾ : 100 ಕೋಟಿ ಆಫರ್‌ ಬಗ್ಗೆ ಹೊಸ ಬಾಂಬ್‌ ಹಾಕಿದ ಪದ್ಮಾವತಿ !

ಬೆಂಗಳೂರು : ಕರ್ನಾಟಕ ರಾಜಕೀಯ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಸಿಎಂ ಯಾರಾಗ್ತಾರೆ ಎಂಬುದನ್ನು ರಾಜ್ಯಪಾಲರಷ್ಟೇ ಘೋಷಿಸಬೇಕಿದೆ. ಈ ಮಧ್ಯೆ ಇಷ್ಟು ದಿನ ತೆರೆಮರೆಯಲ್ಲಿದ್ದ ಘಟಾನುಘಟಿ ನಾಯಕರೆಲ್ಲ ಕರ್ನಾಟಕ ರಾಜಕೀಯದಲ್ಲಿ ಭಾಗಿಯಾಗುತ್ತಿದ್ದಾರೆ.

ಅಂತೆಯೇ ಚುನಾವಣೆಗೂ ಮುಂಚಿನಿಂದಲೂ ನಾಪತ್ತೆಯಾಗಿದ್ದ ಎಐಸಿಸಿ ಸೋಶಿಯಲ್‌ ಮೀಡಿಯಾ ಅಧ್ಯಕ್ಷೆ ರಮ್ಯಾ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರನ್ನು ಕೊಂಡುಕೊಳ್ಳಲು 100 ಕೋಟಿ ಆಫರ್ ಮಾಡಿದ್ದರ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಗುಜರಾತ್‌ ಉದ್ಯಮಿಯೊಬ್ಬರು ಬಿಜೆಪಿ ನಾಯಕರಿಗೆ ಹಣ ಕೊಟ್ಟಿದ್ದು, ಯಾರದು ಉದ್ಯಮಿ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಆ ಉದ್ಯಮಿ ಜೊತೆ ಬಿಜೆಪಿಗೇನು ಸಂಬಂಧ ಎಂದು ಪ್ರಶ್ನಿಸಿರುವ ರಮ್ಯಾ, ಹಂಗಾಮಿ ಹಣಕಾಸು ಸಚಿವರಾಗಿರುವ ಪೀಯೂಷ್‌ ಗೋಯಲ್‌  ಇದಕ್ಕೆ ಪ್ರತಿಕ್ರಿಯಿಸ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಈ ಟ್ವೀಟ್‌ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಗುಜರಾತ್‌ ಮೂಲದ ಉದ್ಯಮಿ ಯಾರು ಎಂಬ ಪ್ರಶ್ನೆ ಮೂಡಿದೆ.

Leave a Reply

Your email address will not be published.