ರಾಜ್ಯದಲ್ಲಿ ಕಾಂಗ್ರೆಸ್‌ನ ಈ ಸ್ಥಿತಿಗೆ ಸಿದ್ದರಾಮಯ್ಯನೇ ಕಾರಣ : ಮಾಜಿ ಸಿಎಂ ವಿರುದ್ಧ ಸಿಡಿದೆದ್ದ ಕೋಳಿವಾಡ

ಬೆಂಗಳೂರು : ಕಾಂಗ್ರೆಸ್‌ ಪಕ್ಷದ ಸೋಲಿಗೆ ಸಿದ್ದರಾಮಯ್ಯನೇ ಕಾರಣ ಎಂದು ಮಾಜಿ ಸ್ಪೀಕರ್‌ ಕೋಳಿವಾಡ ಆರೋಪಿಸಿದ್ದಾರೆ. ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್‌ ಶಾಸಕರು ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದು, ಸಭೆ ಬಳಿಕ ಮಾತನಾಡಿದ ಕೋಳಿವಾಡ, ಸಿದ್ದರಾಮಯ್ಯನಲ್ಲಿ ಕಾಂಗ್ರೆಸ್‌ ರಕ್ತ ಇಲ್ಲ. ಕೆಪಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ನನ್ನನ್ನು ಸೋಲಿಸಿದ. ನನ್ನ ಸೋಲಿಗೂ ಸಿದ್ಧರಾಮಯ್ಯನೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಸಿದ್ಧರಾಮಯ್ಯ ಪರಮೇಶ್ವರ್‌ ಸೋಲಿಗೆ ಕಾರಣವಾಗಿದ್ದ. ಸಿದ್ದರಾಮಯ್ಯ ಟಿಕೆಟ್ ಹಂಚಿಕೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾನೆ. ನಮ್ಮೆಲ್ಲರ ಅನುಮತಿ, ಸಲಹೆ ಸೂಚನೆ ಪಾಲಿಸಿದ್ದರೆ, ಈರೀತಿ ಆಗುತ್ತಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಈ ಸ್ಥಿತಿಗೆ ಬರಲು ಸಿದ್ಧರಾಮಯ್ಯನೇ ಕಾರಣ. ಪರಮೇಶ್ವರ್‌ ನೇತೃತ್ವದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಮುಂದಡಿ ಇಡೋಣ ಎಂದಿರುವ ಕೋಳಿವಾಡ, ಸಿದ್ದರಾಮಯ್ಯ ನ ಅಧಿಕಾರ ಇಷ್ಟಕ್ಕೇ ಮುಗಿದು ಹೋಗಿದೆ. ಇನ್ನೆಂದು ಅವನಿಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.