ಅಮಿತ್ ಶಾ ವಿರುದ್ಧ ಅಖಾಡಕ್ಕಿಳಿದ ಡಿಕೆಶಿ : ರಾಜಕೀಯ ಮಾಡೋಕೆ ನಮಗೂ ಗೊತ್ತು ಎಂದ ನಾಯಕ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕುತೂಹಲಕಾಗಿ ಬೆಳವಣಿಗೆಗಳು ನಡೆಯುತ್ತಿದ್ದು, ಬಿಜೆಪಿ ನಾಯಕರು ಆಪರೇಷನ್‌ ಕಮಲ ನಡೆಸಲು ಚಿಂತನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ನ ನಾಯಕ ಡಿ.ಕೆ ಶಿವಕುಮಾರ್, ಕಾಂಗ್ರೆಸ್‌ ಶಾಸಕರನ್ನು ರೆಸಾರ್ಟ್‌ನತ್ತ ಕೊಂಡೊಯ್ಯಲು ಪ್ಲಾನ್ ಮಾಡಿದ್ದಾರೆ.

ನಮ್ಮ ಯಾವ ಶಾಸಕರೂ ಕಾಂಗ್ರೆಸ್‌ ತೊರೆಯುವುದಿಲ್ಲ. ಜೆಡಿಎಸ್‌ ಶಾಸಕರೂ ಪಕ್ಷದಿಂದ ದೂರ ಹೋಗುವುದಿಲ್ಲ. ಎಲ್ಲರೂ ನಮ್ಮ ಜೊತೆಯೇ ಇರುತ್ತಾರೆ. ಬಿಜೆಪಿಯವರು ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ನಮಗೆ ಗೊತ್ತು. ಬಯ್ಯಾಪುರ ಒಬ್ಬರೇ ಅಲ್ಲ. ಎಲ್ಲಾ ಕಾಂಗ್ರೆಸ್ ನಾಯಕರಿಗೂ ಬಿಜೆಪಿಯವರು ಕರೆ ಮಾಡುತ್ತಿದ್ದಾರೆ. ಆದರೆ ನಮ್ಮ ಶಾಸಕರು ದಡ್ಡರಲ್ಲ. ನಾವು ರಾಜಕಾರಣಿಗಳು, ರಾಜಕೀಯ ಮಾಡೋಕೆ ನಮಗೂ ಬರುತ್ತೆ. ಬಿಜೆಪಿಯವರು ಯಾರ್ಯಾರಿಗೆ ಕರೆ ಮಾಡಿದ್ದಾರೆ ಎಂದು ನಮಗೂ ಗೊತ್ತು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com