ಈ ವಿಷಯದಲ್ಲಿ ಸಚಿನ್ ಗಿಂತ ಕೊಹ್ಲಿಯೇ ಮುಂದಿದ್ದಾರೆ..! : ಶೇನ್ ವಾರ್ನ್ ಹೇಳಿದ್ದೇನು..?

ಜಾಗತಿಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಟ ಆಟಗಾರರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು ಎನ್ನುವುದು ಪ್ರಶ್ಣಾತೀತ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ರನ್ ಮಷಿನ್ ಎಂದೇ ಖ್ಯಾತರಾಗಿದ್ದಾರೆ. ಈ ಇಬ್ಬರು ಮಾಜಿ & ಹಾಲಿ ಕ್ರಿಕೆಟಿಗರ ನಡುವೆ ಹೋಲಿಕೆ, ಯಾರು ಶ್ರೇಷ್ಟ ಎಂಬ ಚರ್ಚೆ ಸಾಮಾನ್ಯ ಸಂಗತಿ.

‘ ಎದುರಾಳಿ ತಂಡದ ಟಾರ್ಗೆಟ್ ಚೇಸ್ ಮಾಡುವ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತ ವಿರಾಟ್ ಕೊಹ್ಲಿ ಮುಂದಿದ್ದಾರೆ ‘ ಎಂದು ಮಾಜಿ ಆಸೀ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

Image result for sachin warne kohli

‘ ವಿರಾಟ್ ಕೊಹ್ಲಿ ಆಡುವ ರೀತಿ, ಅವರ ಅಂಕಿ ಅಂಶಗಳನ್ನು ಹಾಗೂ ಚೇಸ್ ಮಾಡುವಾಗ ಎಷ್ಟು ಶತಕಗಳನ್ನು ಬಾರಿಸಿದ್ದಾರೆ ಎಂಬುದನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕೊಹ್ಲಿ ಮಾಡಿದ ಸಾಧನೆಯನ್ನು ಯಾರಿಂದಲೂ, ಸಚಿನ್ ಅವರಿಂದಲೂ ಕೂಡ ಸಾಧ್ಯವಾಗಿಲ್ಲ. ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್ ನಮ್ಮ ಕಾಲಮಾನದ ಶ್ರೇಷ್ಟ ಆಟಗಾರರಾಗಿದ್ದಾರೆ ‘ ಎಂದಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ 49 ಶತಕ ಹಾಗೂ ವಿರಾಟ್ ಕೊಹ್ಲಿ ಇದುವರೆಗೆ 35 ಶತಕಗಳನ್ನು ಬಾರಿಸಿದ್ದಾರೆ. ಚೇಸಿಂಗ್ ವೇಳೆ ಸಚಿನ್ 17 ಶತಕ ಸಿಡಿಸಿದ್ದು, 14ರಲ್ಲಿ ಭಾರತ ಗೆದ್ದಿದೆ. ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ 21 ಶತಕ ಬಾರಿಸಿದ್ದು, 19 ರಲ್ಲಿ ಟೀಮ್ ಇಂಡಿಯಾ ಗೆದ್ದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com