ವಿಧಾನಸೌಧದ ಸಿಎಂ ಕಚೇರಿಗೆ ಬೀಗ : ಸಂಜೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ ?

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ ಘಟ್ಟ ತಲುಪಿದ್ದು, ಬಿಜೆಪಿ ಸಹಳ ಬಹುಮತ ಪಡೆಯುವ ಸಾಧ್ಯತೆ ಬಹುತೇಕ ಖಚಿತವಾದಂತಾಗಿದೆ. ಸದ್ಯ ಬಿಜೆಪಿ 112 ಸ್ಥಾನ, ಕಾಂಗ್ರೆಸ್‌ 70 ಸ್ಥಾನ, ಜೆಡಿಎಸ್ 38 ಸ್ಥಾನಗಳಿಂದ ಮುನ್ನಡೆ ಕಾಯ್ದುಕೊಂಡಿದೆ.

ಫಲಿತಾಂಶ ಬಹುತೇಕ ಘೋಷಣೆಯಾದಂತಾಗಿದ್ದು, ಕಾಂಗ್ರೆಸ್‌ ಹೀನಾಯ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಸಿಎಂ ನಿವಾಸಕ್ಕೆ ತೆರಳಿದ್ದು ಮಾತುಕತೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಕೆ ಸಿ ವೇಣುಗೋಪಾಲ್, ಅಶೋಕ್ ಗೆಹ್ಲೋಟ್ ಮುಂತಾದವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿ ಸಭೆ ನಡೆಸಿದ್ದಾರೆ.

ಇನ್ನು ಚಾಮುಂಡೇಶ್ವರಿಯಲ್ಲಿ ಸೋಲನುಭವಿಸಿರುವ ಸಿದ್ದರಾಮಯ್ಯ ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಅಲ್ಪ ಮುನ್ನಡೆ ಸಾಧಿಸಿದ್ದು, ಭಾರೀ ಕುತೂಹಲ ಮೂಡಿಸಿದೆ.

ಇಂದು ಸಂಜೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ವಿಧಾನಸೌಧದ ಸಿಎಂ ಕಚೇರಿಗೆ ಬೀಗ ಹಾಕಿರುವುದಾಗಿಯೂ ತಿಳಿದುಬಂದಿದೆ.

Leave a Reply

Your email address will not be published.