ಬಿಜೆಪಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೇ : ರಾಜಗುರು ದೇವೇಗೌಡರ ತಲೆಯಲ್ಲಿ ಓಡುತ್ತಿರೋದೇನು ?

ಬೆಂಗಳೂರು : ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಕ್ಷಣಕ್ಷಣಕ್ಕೂ ಭಾರೀ ಕುತೂಹಲ ಹೆಚ್ಚಿಸುತ್ತಿದೆ. ಬಿಜೆಪಿ ಇನ್ನೇನು ಗೆದ್ದೇ ಬಿಟ್ಟಿತು ಎಂಬ ಸಂಭ್ರಮದಲ್ಲಿರುವಾಗಲೇ ರಾಜಕೀಯ ಚತುರ ದೇವೇಗೌಡರ ಗೇಮ್‌ ಪ್ಲಾನ್‌ ಮಾಡಿದ್ದಾರೆ ಎನ್ನಲಾಗಿದೆ.

ವಿರೋಧ ಪಕ್ಷಗಳೇ ಇರಬಾರದು ಎನ್ನುತ್ತಿದ್ದ ಮೋದಿ ಸರ್ಕಾರದಕ್ಕೆ ಕರ್ನಾಟಕದಲ್ಲಿ ದೇವೇಗೌಡರು ಚೋಕ್‌ ನೀಡಲು ಸಿದ್ಧತೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ 107 ಸ್ಥಾನ ಗೆದ್ದಿದ್ದು, ಕಾಂಗ್ರೆಸ್‌ 73, ಜೆಡಿಎಸ್‌ 40 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಆದರೆ ಇನ್ನೂ  ಬಿಜೆಪಿಗೆ ಸರಳ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಕಸರತ್ತು ನಡೆದಿದೆ. ಏನೇ ಆದರೂ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದುಕೊಂಡಿದ್ದ ದೇವೇಗೌಡರಿಗೆ ಕಾಂಗ್ರೆಸ್‌ ಕಡೆಯಿಂದ ಮೈತ್ರಿ ಸರ್ಕಾರ ರಚನೆಗೆ ಬುಲಾವ್‌ ಬಂದಿರುವುದು ದೇವೇಗೌಡರ ಶಕ್ತಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ನಾಯಕರು ಒಟ್ಟಾಗಿ ಸಭೆ ನಡೆಸುತ್ತಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿ, ಜಿ.ಪರಮೇಶ್ವರ್‌ ಅವರನ್ನು ಉಪಮುಖ್ಯಮಂತ್ರಿ ಮಾಡುವ ಕುರಿತು ಕುತೂಹಲಕರ ಚರ್ಚೆ ನಡೆಸುತ್ತಿದ್ದಾರೆ. ಕೇಂದ್ರ ನಾಯಕ ಗುಲಾಂ ನಬಿ ಆಜಾದ್‌ ಈ ಕುರಿತು ದೇವೇಗೌಡರ ಬಳಿ ಮಾತನಾಡಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಕಲ ಪ್ರಯತ್ನ ನಡೆಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com