ಆಪರೇಷನ್‌ ಕಮಲದ ಭೀತಿಗೆ ಕೈ-ದಳ ಗಡಗಡ : ರೆಸಾರ್ಟ್‌ ರಾಜಕಾರಣಕ್ಕೆ ಮುಂದಾದ ಜೆಡಿಎಸ್‌-ಕಾಗ್ರೆಸ್‌ ?!

ಬೆಂಗಳೂರು : ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದು, ಸರ್ಕಾರ ರಚನೆಗೆ ಒಂದು ವಾರಗಳ ಕಾಲಾವಕಾಶ ಕೇಳಿದ್ದಾರೆ.

ಬಿಜೆಪಿ ಕಾಲಾವಕಾಶ ಕೇಳುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಅಲರ್ಟ್‌ ಆಗಿದ್ದು, ತಮ್ಮ ತಮ್ಮ ಶಾಸಕರುಗಳನ್ನು ಜೋಪಾನ ಮಾಡುವ ಸಲುವಾಗಿ ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗಿದ್ದಾರೆ.

ರಾಜಕೀಯ ಮೂಲಗಳ ಪ್ರಕಾರ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರುಗಳನ್ನು ಆಪರೇಷನ್‌ ಕಮಲದಿಂದ ತಪ್ಪಿಸುವ ಸಲುವಾಗಿ ಆಂಧ್ರಪ್ರದೇಶ ಅಥವಾ ಪಂಜಾಬ್‌ ಗೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published.