ಮತ್ತೆ ಒಂದಾದ ಬದ್ದ ವೈರಿಗಳು : ರಾಜ್ಯಪಾಲರನ್ನು ಭೇಟಿಯಾಗಿ ಪತ್ರ ಸಲ್ಲಿಸಿದ ಕೈ, ದಳ ನಾಯಕರು

ಬೆಂಗಳೂರು : ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕಾರಣ ಸ್ವಲ್ಪ ತಿಳಿಯಾದಂತೆ ಕಾಣುತ್ತಿದೆ. ಬಿಜೆಪಿ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿ ಬಂದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿದ್ದು, ಅಧಿಕ ಸಂಖ್ಯಾಬಲ ಹೊಂದಿರುವ ಹಿನ್ನೆಲೆಯಲ್ಲಿ  ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷ ಸರ್ವಾನುಮತದಿಂದ ಜೆಡಿಎಸ್‌ಗೆ ಬೆಂಬಲ ಸೂಚಿಸಿದೆ. ಕಾಂಗ್ರೆಸ್‌ ನೆರವಿನೊಂದಿಗೆ ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಬೆಂಬಲ ಸೂಚಿಸಿದ್ದರ ಬಗ್ಗೆ ದೇವೇಗೌಡರಿಗೆ ಹಾಗೂ ರಾಜ್ಯಪಾಲರಿಗೆ ಪತ್ರದ ಮುಖೇನ ತಿಳಿಸಿದ್ದೇವೆ. ಇದಕ್ಕೆ ದೇವೇಗೌಡರೂ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ  ಜೆಡಿಎಸ್‌ ಆಡಳಿತ ನಡೆಸಲಿದೆ. ಅದಕ್ಕೆ ರಾಜ್ಯಪಾಲರೂ ಅವಕಾಶ ನೀಡುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯಪಾಲರನ್ನು ಭೇಟಿಯಾಗಿ ನಾವು ಪತ್ರ ನೀಡಿದ್ದೇವೆ.  ಚುನಾವಣಾ ಆಯೋಗದಿಂದ ಪಟ್ಟಿ ತರಿಸಿಕೊಂಡು ಬಳಿಕ ಪರಿಶೀಲನೆ ನಡೆಸುವುದಾಗಿ  ರಾಜ್ಯಪಾಲರು ಹೇಳಿದ್ದಾರೆ. ಬಿಜೆಪಿ ಯಾಕೆ ಕಾಲಾವಕಾಶ ಕೇಳಿದೆಯೋ ಗೊತ್ತಿಲ್ಲ. ಅದನ್ನು ಅವರಿಗೇ ಕೇಳಬೇಕು. ಆಪರೇಷನ್‌ ಕಮಲ ಮಾಡುವ ಸಾಧ್ಯತೆಯೂ ಇದೆ. ಏನಾಗುತ್ತದೋ ಕಾದು ನೋಡೋಣ ಎಂದಿದ್ದಾರೆ.

7 thoughts on “ಮತ್ತೆ ಒಂದಾದ ಬದ್ದ ವೈರಿಗಳು : ರಾಜ್ಯಪಾಲರನ್ನು ಭೇಟಿಯಾಗಿ ಪತ್ರ ಸಲ್ಲಿಸಿದ ಕೈ, ದಳ ನಾಯಕರು

Leave a Reply

Your email address will not be published.