ಮುಂದುವರಿದ ಹೈಡ್ರಾಮಾ : ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಒಂದು ವಾರದ ಕಾಲಾವಕಾಶ ಕೋರಿದ ಬಿಜೆಪಿ ನಾಯಕರು !

ಬೆಂಗಳೂರು : ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯಪಾಲರನ್ನು ಭೇಟಿಯಾಗುವ ಸಲುವಾಗಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹಾಗೂ  ಬಿ.ಎಸ್‌ ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ಬಿಜೆಪಿಯ ಕೆಲ ಮುಖಂಡರು ರಾಜಭವನಕ್ಕೆ ತೆರಳಿದ್ದು, ರಾಜ್ಯಪಾಲರೊಂಡಿಗೆ ಮಾತುಕತೆ ನಡೆಸಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸರ್ಕಾರ ರಚನೆಗೆ 1 ವಾರಗಳ ಕಾಲಾವಕಾಶ ಕೋರಿದ್ದೇವೆ. ಒಂದು ವಾರದ ಒಳಗೆ ನಾವು ಸರಳ ಬಹುಮತಗಳಿಸಿ ಸರ್ಕಾರ ರಚನೆ ಮಾಡುತ್ತೇವೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.

 

One thought on “ಮುಂದುವರಿದ ಹೈಡ್ರಾಮಾ : ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಒಂದು ವಾರದ ಕಾಲಾವಕಾಶ ಕೋರಿದ ಬಿಜೆಪಿ ನಾಯಕರು !

Leave a Reply

Your email address will not be published.

Social Media Auto Publish Powered By : XYZScripts.com