ಸಿದ್ದರಾಮಯ್ಯ ಸಂಪುಟದ ಘಟಾನುಘಟಿ ಸಚಿವರುಗಳನ್ನು ಮಕಾಡೆ ಮಲಗಿಸಿದ ಜನತಾ ಜನಾರ್ಧನರು !

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನೇಕರು ಹೀನಾಯ ಸೋಲು ಅನುಭವಿಸಿದ್ದಾರೆ.
 ಯಾರೂ ಊಹಿಸಿರದ ರೀತಿಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ವಿರುದ್ಧ ಸೋಲೊಪ್ಪಿಕೊಂಡಿದ್ದಾರೆ.
ಮತ್ತೊಂದೆಡೆ ಟಿ.ನರಸೀಪುರದಲ್ಲಿ ಸಿದ್ದರಾಮಯ್ಯ ಆಪ್ತ, ಲೋಕೋಪಯೋಗಿ ಸಚಿವ ಎಚ್‌.ಸಿ ಮಹದೇವಪ್ಪ ಸಹ ಹೀನಾಯವಾಗಿ ಸೋತಿದ್ದಾರೆ.
 ಬಾಗಲಕೋಟೆ ಜಿಲ್ಲೆಯ ತೆರದಾಳದಲ್ಲಿ ಉಮಾಶ್ರೀ, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಧಾರವಾಡ ಕಲಘಟಗಿಯಲ್ಲಿ ಸಂತೋಷ್‌ ಲಾಡ್‌, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿ. ರಮಾನಾಥ ರೈ ಸೋಲನುಭವಿಸಿದ್ದಾರೆ.
ಹಾವೇರಿಯಿಂದ ಸ್ಪರ್ದಿಸಿದ್ದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಬಿಜೆಪಿಯ ನೆಹರೂ ಓಲೇಕಾರ್ ವಿರುದ್ಧ ಸೋಲನುಭವಿಸಿದ್ದು, ಇನ್ನು ಯಲಬುರ್ಗಾದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಸೋಲನುಭವಿಸಿದ್ದಾರೆ.
ಅಲ್ಲದೆ ಕಾನೂನು ಖಾತೆ ಸಚಿವ ಟಿ.ಬಿ ಜಯಚಂದ್ರ ಸಹ ಸೋಲೊಪ್ಪಿಕೊಂಡಿದ್ದಾರೆ. ಇನ್ನು ಉಡುಪಿಯಲ್ಲಿ ಪ್ರಮೋದ್ ಮದ್ವರಾಜ್ ಹೀನಾಯವಾಗಿ ಸೋತಿದ್ದರೆ, ಸಾರಿಗೆ ಸಚಿವ ಎಚ್.ಎಂ ರೇವಣ್ಣ, ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ಡಾ.ಶರಣಪ್ರಕಾಶ ಪಾಟೀಲ್‌, ಮಾಜಿ ಸಚಿವರಾದ ಅಭಯಚಂದ್ರ ಜೈನ್‌ ಸೋಲೊಪ್ಪಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com