ಭ್ರಮನಿರಸನಗೊಂಡ BSY : ಬಾಯ್ಬಿಡದ ಯಡಿಯೂರಪ್ಪ : ಚೆಂಡು ಈಗ ಹೈಕಮಾಂಡ್ ಅಂಗಳಕ್ಕೆ

ಬೆಂಗಳೂರು : ಕರ್ನಾಟಕದ ಜನತೆ  ಬಿಜೆಪಿಗೆ ಬಹುಮತ ನೀಡಿದ್ದಾರೆ. ಆದರೆ ಕಾಂಗ್ರೆಸ್‌  ಹಿಂಬಾಗಿಲ ದಾರಿ ಹಿಡಿಯುತ್ತಿದೆ. ಇದನ್ನು ನಾನು ಖಂಡಿಸುವುದಾಗಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರೋಧಿ ಅಲೆಯಿಂದ ಜೆಡಿಎಸ್‌ ಸ್ಥಾನ ಗಳಿಸಿದೆ. ಕರ್ನಾಟಕದ ಜನ ಬಿಜೆಪಿಗೆ ಕೊಟ್ಟಿರುವ ಬೆಂಬಲಕ್ಕೆ ತಲೆಬಾಗುತ್ತೇನೆ. ಕಾಂಗ್ರೆಸ್‌ ದಯನೀಯ ಸೋಲನುಭವಿಸಿದ ಮೇಲೂ, ತಿರಸ್ಕಾರಗೊಂಡರೂ ಹಿಂಬಾಲಿಗಿಲಿನಿಂದ ಅಧಿಕಾರ ಹಿಡಿಯೋ ಪ್ರಯತ್ನ ಮಾಡುತ್ತಿದೆ. ಇದು ಖಂಡನೀಯ. 2018ರಲ್ಲಿ ಜನರ ತೀರ್ಪು ಬಿಜೆಪಿ ಜೊತೆಗಿದೆ. ಕರ್ನಾಟಕದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್‌ ಮುಕ್ತ ಮಾಡಬೇಕೆಂಬ ನಮ್ಮ ಕನಸು ನನಸಾಗಿದೆ.

ಸರಳ ಬಹುಮತಕ್ಕೆ ಬೇಕಾದ  ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com