ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದ ಲಾರಿ : ಚಕ್ರದಡಿ ಸಿಲುಕಿ ಪ್ರಾಣಬಿಟ್ಟ ಏಳು ಹಸುಗಳು
ಯಾದಗಿರಿ : ಚಾಲಕನ ನಿರ್ಲಕ್ಷ್ಯದಿಂದ ಮನೆಗೆ ಲಾರಿ ನುಗ್ಗಿದ ಪರಿಣಾಮ ಏಳು ಹಸುಗಳು ಪ್ರಾಣಬಿಟ್ಟ ಘಟನೆ ಯಾದಗಿರಿಯ ರಾಮಸಮುದ್ರದಲ್ಲಿ ನಡೆದಿದೆ.
ಚಾಲಕ ರಸ್ತೆ ಬದಿ ಲಾರಿ ನಿಲ್ಲಿಸಿ ಊಟಕ್ಕೆಂದು ತೆರಳಿದ್ದ ಈ ವೇಳೆ ಹಿಂದಕ್ಕೆ ಚಲಿಸಿದ ಲಾರಿ ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದ್ದು, ಮನೆಯಲ್ಲಿ ಕಟ್ಟಿದ್ದ ಹಸುಗಳ ಮೇಲೆ ಹರಿದಿದೆ.
ಘಟನೆ ನಡೆದ 14 ಗಂಟೆಯಾದರೂ ಸ್ಥಳಕ್ಕೆ ಪೊಲೀಸರು ಬರದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.