ಶಿವಮೊಗ್ಗದಲ್ಲಿ ಈ ಬಾರಿ ಗೆಲ್ಲೋದು ಕಾಂಗ್ರೆಸ್ಸೇ, ಫಲಿತಾಂಶ ಏನಿದ್ದರೂ ನಮ್ಮ ಪರವೇ ಎಂದ ಪ್ರಸನ್ನ ಕುಮಾರ್

ಶಿವಮೊಗ್ಗ : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಬಿಜೆಪಿಯ ಈಶ್ವರಪ್ಪ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ನಾಯಕರಾಗಿರುವ ಈಶ್ವರಪ್ಪ ಎಲ್ಲೂ ಪ್ರಚಾರಕ್ಕೆ ಹೋಗದೆ ಶಿವಮೊಗ್ಗದಲ್ಲೆ ಉಳಿದು ಕೊಂಡು ಪ‌್ರಚಾರ ನಡೆಸಿದ್ದು ಯಾಕೆ?.

ಸೋಲುವ ಭಯದಿಂದ ಈಶ್ವರಪ್ಪ ಕ್ಷೇತ್ರ ಬಿಟ್ಟು ಹೋಗಿಲ್ಲ. ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳೆ ಇಲ್ಲ ಎನ್ನುವ ಈಶ್ವರಪ್ಪ ಅಮಿತ್ ಷಾ ಹಾಗೂ ನರೇಂದ್ರ ಮೋದಿಯರನ್ನು ಯಾಕೆ ಕರೆಸಿ ಪ್ರಚಾರ ನಡೆಸಿದರು ಎಂದು ಪ್ರಶ್ನಿಸಿದ್ದಾರೆ.

ನಾಳೆಯ ಫಲಿತಾಂಶ ಕಾಂಗ್ರೆಸ್ ಪಕ್ಷದ ಪರವಾಗಿ ಬರುತ್ತದೆ, 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೆನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Leave a Reply

Your email address will not be published.