ಮೋದಿ ಮುಕುಟಕ್ಕೆ ಮತ್ತೊಂದು ಗರಿ : ಜಾಹೀರಾತಿಗಾಗಿ ಮಾಡಿದ ಖರ್ಚಿನಲ್ಲಿ ನಮೋಗೆ ಅಗ್ರಸ್ಥಾನ

ಮುಂಬೈ : ಬೇರೆ ಬೇರೆ ಮಾಧ್ಯಮಗಳಿಗೆ ಪ್ರಚಾರ ನೀಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರೋಬ್ಬರಿ 4,343 ಕೋಟಿ ರೂ ವ್ಯಯಿಸಿರುವುದಾಗಿ ಆರ್‌ಟಿಐನಿಂದ ತಿಳಿದುಬಂದಿದೆ.
ಮುಂಬೈ ಮೂಲದ ಆರ್‌ಟಿಐ ಕಾರ್ಯಕರ್ತ ಅನಿಲ್‌ ಗಲ್ಗಲಿ ಎಂಬುವವರು ಕೇಂದ್ರ ಸರ್ಕಾರ ಜಾಹೀರಾತು ಮತ್ತು ಪ್ರಚಾರಕ್ಕಾಗಿ ವ್ಯಯಿಸಿರುವ ಮೊತ್ತದ ಮಾಹಿತಿ ನೀಡುವಂತೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಬಿಒಸಿಯ ಹಣಕಾಸು  ಸಲಹೆಗಾರ ತಪನ್‌ ಸೂತ್ರಧರ್‌ ಮಾಹಿತಿ ನೀಡಿದ್ದು,   2014ರಿಂದ ಇದುವರೆಗೂ ಕೇಂದ್ರ ಸರ್ಕಾರ 4,300 ಕೋಟಿ ರೂ ವ್ಯಯಿಸಿರುವುದಾಗಿ ಹೇಳಿದೆ.
2015ರಿಂದ 16ರ ವರೆಗೆ ಪ್ರಿಂಟ್‌ ಮೀಡಿಯಾಗೆ 510 ಕೋಟಿ ರೂ. ವಿಶ್ಯವಲ್‌ ಮೀಡಿಯಾಗೆ  541 ಕೋಟಿ ರೂ , ಹೊರಾಂಗಣ ಪ್ರಚಾರಕ್ಕೆ 118 ಕೋಟಿ ಸೇರಿದಂತೆ ಒಟ್ಟಾರೆ 1,171 ಕೋಟಿ ರೂ ವ್ಯಯಿಸಿದೆ
ಇನ್ನು 2017ರಿಂದ 18ರವರೆಗೆ ಮುದ್ರಣ ಮಾಧ್ಯಮಕ್ಕೆ 955 ಕೋಟಿ ರೂ, ದೃಶ್ಯ ಮಾಧ್ಯಮಕ್ಕೆ 475 ಕೋಟಿ ರೂ., ಹೊರಾಂಗಣ ಪ್ರಚಾರಕ್ಕೆ 147 ಕೋಟಿ ರೂ ಖರ್ಚು ಮಾಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com