ಪೈಲ್ವಾನ್‌ ಕಿಚ್ಚನ ಖದರ್‌ ನೋಡಲು ಸ್ಯಾಂಡಲ್‌ವುಡ್‌ಗೆ ಬಂದ್ಲು ರಾಜಸ್ಥಾನಿ ಚೆಲುವೆ

ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾಗೆ ನಟಿ ಫಿಕ್ಸ್ ಆಗಿದ್ದಾರೆ. ಆರಡಿ ಕಟೌಟ್‌ ಕಿಚ್ಚನಿಗೆ ಜೈಪುರದ ಚೆಲುವೆಯೊಬ್ಬಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾಳೆ.

ಮೂಲತಃ ಜೈಪುರದವರಾದ ನಟಿ ಆಕಾಂಕ್ಷಾ ಸಿಂಗ್‌, ಮಾಡೆಲ್‌ ಹಾಗೂ ಕಿರುತೆರೆಯಲ್ಲೂ ಅಭಿನಯಿಸುತ್ತಿದ್ದಾರೆ. ಸದ್ಯ ಕಿಚ್ಚನಿಗಾಗಿ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನಲ್ಲಿ ಬಣ್ಣ ಹಚ್ಚಲಿದ್ದಾರೆ.

ಮೇ 17ರಿಂದ ಪೈಲ್ವಾನ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ  ವಾರದಲ್ಲೇ ಪೈಲ್ವಾನನ  ಕುಸ್ತಿ ಅಖಾಡಕ್ಕೆ ಆಕಾಂಕ್ಷ ಸೇರಿಕೊಳ್ಳಲಿದ್ದಾರೆ.

ಆಕಾಂಕ್ಷಾ ಸಿಂಗ್‌, ಹಿಂದಿಯ ಜನಪ್ರಿಯ ಧಾರಾವಾಹಿ ನಾ ಬೋಲೆ  ತುಮ್‌ ನಾ ಮೈನೆ ಕುಚ್‌ ಕಹಾ ದಲ್ಲಿ ನಾಯಕಿಯಾಗಿದ್ದರು. ಅಲ್ಲದೆ ಗುಲ್ಮೊಹರ್‌ ಗ್ರ್ಯಾಂಡ್ ಎಂಬ ಶೋನಲ್ಲೂ ಕಾಣಿಸಿಕೊಂಡಿದ್ದ ಆಕಾಂಕ್ಷ ಈಗ ಪೈಲ್ವಾನ್‌ ಕಿಚ್ಚನಿಗೆ ರಾಣಿಯಾಗಿ ಬರಲಿದ್ದಾರೆ.

ಉತ್ತರ ಭಾರತದವರಾದರೂ ದಕ್ಷಿಣ ಭಾರತೀಯರಂತೆ ಕಾಣುವುದರಿಂದ ಈಕೆಯನ್ನು ನಾಯಕ ನಟಿ ಪಾತ್ರಕ್ಕೆ ಹಾಕಿಕೊಂಡಿದ್ದಾರೆ ನಿರ್ದೇಶಕ ಕೃಷ್ಣ ಹೇಳಿದ್ದಾರೆ.

Leave a Reply

Your email address will not be published.