ಕೂಡಲೆ ಸಂಸದ ಶ್ರೀರಾಮುಲು ಮೇಲೆ FIR ದಾಖಲಿಸಿ, ತನಿಖೆ ಮಾಡಿ…….

ಹುಬ್ಬಳ್ಳಿ : 2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮೈನಿಂಗ್ ಮಾಫಿಯಾದ ಕರೆನೆರಳು ಬಿದ್ದಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್ ಹಿರೇಮಠ್ ಹೇಳಿದ್ದಾರೆ.

ಮುಖ್ಯ ನ್ಯಾಯಾಧೀಶರಾದ ಕೆ ಜಿ ಬಾಲಕೃಷ್ಣ ಅವರಿಗೆ 160 ಕೋಟಿ ಹಣದ ಆಮೀಷ ಒಡ್ಡಿರುವ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಉಮೇದುವಾರಿಕೆ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ.

ಗಾಲಿ‌ ಜನಾರ್ದನ ರೆಡ್ಡಿ ಮೇಲಿನ ಕೋರ್ಟ್‌ ಕೇಸ್ ಗಳನ್ನು ಖುಲಾಸೆ ಮಾಡಲು ಶ್ರೀರಾಮುಲು ನ್ಯಾಯಮೂರ್ತಿಗಳಿಗೇ ಹಣದ ಆಮಿಷ ಒಡ್ಡಿದ್ದರು ಎಂದು ಇತ್ತೀಚೆಗಷ್ಟೇ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಕೂಡಲೆ ಬಿ ಶ್ರೀರಾಮುಲು ಮೇಲೆ ಎಫ್ ಐ ಆರ್ ದಾಖಲಿಸಿ ತನಿಖೆ ಮಾಡುವಂತೆ ಒತ್ತಾಯಿಸಲಾಗಿದ್ದು, ನಷ್ಟವಾದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಮರಳಿಸುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಸುದೀರ್ಘ ಪತ್ರವನ್ನು ಬರೆಯುತ್ತೇನೆ ಎಂದು ಹಿರೇಮಠ್‌ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com