ಯಡಿಯೂರಪ್ಪನೇ ನನ್ನ ಗಾಡ್‌ ಫಾದರ್‌, ಕೊನೆವರೆಗೂ ಬಿಜೆಪಿಲೇ ಇರ್ತೀನಿ : ಎಲೆಕ್ಷನ್‌ ದಿನ ನಾಪತ್ತೆಯಾಗಿದ್ದ ಅಭ್ಯರ್ಥಿ ಹೇಳಿಕೆ

ದೊಡ್ಡಬಳ್ಳಾಪುರ : ಚುನಾವಣೆ ದಿನ ನಾಪತ್ತೆಯಾಗಿದ್ದ ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ ನರಸಿಂಹಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ.

ಚುನಾವಣೆಯ ದಿನದ ಮುಂಜಾನೆ 3 ಗಂಟೆಯಿಂದ ನರಸಿಂಹ ಸ್ವಾಮಿ ನಾಪತ್ತೆಯಾಗಿದ್ದರು. ಈ ಕುರಿತು ವಿಷಾದ ವ್ಯಕ್ತಪಡಿಸಿರುವ ನರಸಿಂಹಸ್ವಾಮಿ, ಮತದಾರರಿಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕ್ಷಮೆ ಕೇಳಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಕ್ಷಮಿಸಿ. ಚುನಾವಣೆ ದಿನದ ಮುಂಜಾನೆ ಘಟನೆ ನಾನು ಮನಸಿನ ಇಚ್ಛೆಯಂತೆ ಮಾಡಿಲ್ಲ. ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುವೆ.ಅದರ ಕಾರಣವನ್ನ ಚುನಾವಣೆ ಫಲಿತಾಂಶ ಬಂದ ನಂತರ ಪಕ್ಷದ ಕಚೇರಿಯಲ್ಲಿ ತಿಳಿಸುವೆ ಎಂದಿದ್ದಾರೆ.

30 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ.ನನ್ನದೆ ಪಕ್ಷದ ಕೆಲವು ವಿರೋಧಿಗಳು ಮತ್ತು ವಿರೋಧಿ ಪಕ್ಷದ ಕಾರ್ಯಕರ್ತರು ಫೇಸ್‌ ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ. ಪಕ್ಷ ತಾಯಿ ಇದ್ದಂತೆ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವೆ. ನನ್ನ ಗಾಡ್ ಫಾದರ್ ಯಡಿಯೂರಪ್ಪ ನಾನು ರಾಜಕೀಯದಲ್ಲಿ ಇರುವವರೆಗೂ ಬಿಜೆಪಿ ಪಕ್ಷದಲ್ಲಿ ಇರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published.