ಸುಪ್ರೀಂಕೋರ್ಟ್‌ಗೆ ಕಾವೇರಿ ಸ್ಕೀಂ ಕರಡು ಸಲ್ಲಿಸಿದ ಕೇಂದ್ರ : ಮೇ 17ಕ್ಕೆ ವಿಚಾರಣೆ ಮುಂದೂಡಿಕೆ

ದೆಹಲಿ : ಕಾವೇರಿ ನೀರು  ನಿರ್ವಹಣಾ ಮಂಡಳಿ ಕರಡನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ, ಪುದುಚೆರಿ ರಾಜ್ಯಗಳ ನಡುವೆ ಕಾವೇರಿ  ನೀರಿನ ಹಂಚಿಕೆ  ಸಂಬಂಧ ನ್ಯಾಯಾಲಯದ ಪರಿಶೀಲನೆ ಹಾಗೂ ಅನುಮೋದನೆಗಾಗಿ ಯೋಜನೆಯ ವರದಿಯನ್ನು ಸಲ್ಲಿಕೆ ಮಾಡಿದ್ದು, ಯೋಜನೆಯ ದಾಖಲೆಗಳ ಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಹೇಳಿದೆ.

ಈ ವರದಿ ನಮ್ಮ ತೀರ್ಪಿಗೆ ಬದ್ದವಾಗಿದೆಯೇ ಎಂದು ನಾವು ಪರಿಶೀಲಿಸಬೇಕು. ಫೆಬ್ರವರಿ 16ರಂದು ನೀಡಿದ್ದ ತೀರ್ಪಿಗೆ ಹೊಂದಿಕೆಯಾಗುವಂತೆ ಈ ಕರಡು ಇದೆ ಎಂಬುದನ್ನು ಪರಿಶೀಲಿಸುತ್ತೇವೆ. ಬಳಿಕ  ಇದೇ ತಿಂಗಳ 16ರಂದು ಯೋಜನೆಗೆ ಅನುಮೋದನೆ ನೀಡುವುದಾಗಿ ಹೇಳಿದೆ.

ಮೇ 8ರಂದು ಕೇಂದ್ರಕ್ಕೆ ಸಮನ್ಸ್ ನೀಡಿದ್ದ ನ್ಯಾಯಾಲಯ,  ಇಂದು ಕರಡು ಯೋಜನೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು. ಅದರಂತೆ ಇಂದು ಕೇಂದ್ರ ಸರ್ಕಾರ ಕರಡು ಯೋಜನೆ ಸಲ್ಲಿಸಿದ್ದು, ಕಾವೇರಿ ನದಿ ನೀರು ಪ್ರಾಧಿಕಾರ ರಚಿಸಲಾಗುವುದು ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದೂ ತಿಳಿಸಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com