ಉತ್ತರ ಭಾರತದಲ್ಲಿ ಧೂಳಿನ ಬಿರುಗಾಳಿಗೆ ತತ್ತರಿಸಿದ ಜನತೆ : 39ಕ್ಕೂ ಹೆಚ್ಚು ಮಂದಿ ಸಾವು

ದೆಹಲಿ : ರಾಜಧಾನಿ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾಪ ಸಂಜೆ ಏಕಾಏಕಿ ಧೂಳಿನ ಬಿರುಗಾಳಿ ಬೀಸಿದ್ದು, ಗಾಳಿ, ಮಳೆಗೆ ದೆಹಲಿಯಲ್ಲಿ ಇಬ್ಬರು, ಸಿಡಿಲಿಗೆ ಪಶ್ಚಿಮ ಬಂಗಾಳದಲ್ಲಿ 12 ಮಂದಿ, ಉತ್ತರ ಪ್ರದೇಶದಲ್ಲಿ 18 ಹಾಗೂ ಆಂಧ್ರ ಪ್ರದೇಶದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ.

ದೆಹಲಿಯಲ್ಲಿ 109 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 200ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ವಿಮಾನ ಸಂಚಾರ, ರೈಲು ಸಂಚಾರವೂ ಅಸ್ತವ್ಯಸ್ತವಾಗಿದೆ. ಹರ್ಯಾಣ , ಪಂಜಾಬ್‌, ನೋಯ್ಡಾದಲ್ಲಿ  ಭಾರೀ ಧೂಳಿನ ಬಿರುಗಾಳಿ ಬೀಸಿದೆ. ರಾಜಧಾನಿಯ ಬಹುತೇಕ ಕಡೆ ವಿದ್ಯುತ್‌ ಕಂಬಗಳು ಮುರಿದುಬಿದ್ದಿದ್ದು ವಾಹನ ಓಡಿಸಲೂ ಕಷ್ಟಪಡುತ್ತಿದ್ದಾರೆ.

ಬುಧವಾರದವರೆಗೆ ಧೂಳಿನ ಬಿರುಗಾಳಿ ಹೆಚ್ಚಿರಲಿದ್ದು, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com