ರೌಡಿ ಕಾರ್ಪೋರೇಟರ್‌ನನ್ನು ರಸ್ತೆಯಲ್ಲಿ ಎಳೆದೊಯ್ದಿದ್ದ ಪೊಲೀಸರ ವಿರುದ್ದ ತಿರುಗಿಬಿದ್ದ ಪಾಲಿಕೆ ಸದಸ್ಯರು !

ದಾವಣಗೆರೆ : ಮಹಾನಗರ ಪಾಲಿಕೆ ಸದಸ್ಯ ಜೆ.ಎನ್ ಶ್ರೀನಿವಾಸ್ ಆಲಿಯಾಸ್ ಮೋಟ್ಬಳ್ ಸೀನನನ್ನು ನಿನ್ನೆ ಪೊಲೀಸರು ರಸ್ತೆಯ ಮೇಲೆ ಕಾಲರ್‌ ಹಿಡಿದು ಎಳೆದೊಯ್ದ ಪ್ರಕರಣ ಸಂಬಂಧ ಪೊಲೀಸರ ವಿರುದ್ದ ಮಹಾನಗರ ಪಾಲಿಕೆ ಸದಸ್ಯರುಗಳು ಸಿಡಿದೆದ್ದಿದ್ದಾರೆ.

ಮಹಾನಗರ ಪಾಲಿಕೆ ಸದಸ್ಯರು ಜಂಟಿ ಪತ್ರಿಕಾಗೋಷ್ಟಿ ಕರೆದಿದ್ದು, ಮತದಾನದ ದಿನ ಯಾವುದೇ ಗಲಾಟೆ ನಡೆದಿರಲಿಲ್ಲ. ಶ್ರೀನಿವಾಸ್‌ ಯಾರಿಗೂ ಹೊಡೆದಿರಲಿಲ್ಲ. ಬಿಜೆಪಿಯವರ ದೂರನ್ನು ಮಾತ್ರ ಪರಿಗಣಿಸಿ , ಘಟನೆಯನ್ನು ಪರಿಶೀಲಿಸದೆ ಪೊಲೀಸರು ಶ್ರೀನಿವಾಸ್‌ರನ್ನು ಕರೆದೊಯ್ದಿದ್ದಾರೆ. ಒಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದು, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ. ಜತೆಗೆ ಕೊರಳ ಪಟ್ಟಿ ಹಿಡಿದು ನಡೆಸಿಕೊಂಡು ಬಂದ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಪಟ್ಟು ಹಿಡಿದಿದ್ದಾರೆ.

ಮತದಾನದ ವೇಳೆ ಸೀನ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದು, ನಡುರಸ್ತೆಯಲ್ಲಿ ಕುತ್ತಿಗೆ ಪಟ್ಟಿ ಹಿಡಿದು ಕರೆದೊಯ್ದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com