ದಲಿತರನ್ನು ಕಾಂಗ್ರೆಸ್‌ನಲ್ಲಿ ಹೇಗೆ ನಡೆಸ್ಕೋತಾರೆ ಎಂಬುದು ಎಲ್ಲರಿಗೂ ಗೊತ್ತಿದೆ : CM ಗೆ ಸಿ.ಟಿ ರವಿ ಟಾಂಗ್‌

ಚಿಕ್ಕಮಗಳೂರು : ದಲಿತ ಸಿ ಎಂ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ ರವಿ ಟಾಂಗ್‌ ನೀಡಿದ್ದಾರೆ. ಸಿದ್ರಾಮಯ್ಯ ಚುನಾವಣೆ ಪೂರ್ವದಲ್ಲಿ ನಾನೇ ಸಿ ಎಂ ಅಂತಾ ಹೇಳ್ತಾ ಇದ್ರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರಮೇಶ್ವರ್ ರನ್ನು ಡಿಸಿಎಂ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದ್ರೆ ವರ್ಷಗಟ್ಟಲೆ ಅವರಿಗೆ ಮಂತ್ರಿ ಸ್ಥಾನವನ್ನೇ ನೀಡಲಿಲ್ಲ. ಆಗ ಒಬ್ಬ ಕೆಪಿಸಿಸಿ ದಲಿತ ಅಧ್ಯಕ್ಷನನ್ನು ಹೇಗೆ ನಡೆಸಿಕೊಂಡ್ರು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಆದ್ರೆ ಈಗ ದಲಿತ ಮುಖ್ಯಮಂತ್ರಿ ದಾಳವನ್ನು ಸಿದ್ದರಾಮಯ್ಯ ಉರುಳಿಸಿದ್ದಾರೆ. ಹಾಗಾಗಿ ಅವರಿಗೆ ಬಹುಮತ ಬರಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸಿ.ಟಿ ರವಿ ಹೇಳಿದ್ದಾರೆ.

ತನ್ನ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಇಲ್ಲ ಎಂಬುದನ್ನು ಸಿ ಎಂ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಮತಗಟ್ಟೆಗಳ ಸಮೀಕ್ಷೆಗಳು ನಿಮಗೆ ಅಧಿಕಾರ ಇಲ್ಲ ಎಂದು ಹೇಳಿವೆ. ಆದ್ದರಿಂದ ಇದ್ದಾಗ ಅಧಿಕಾರ ಕೊಡದೇ ಇದ್ದವರು ಇಲ್ಲದಾಗ ಕೊಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಲಿತ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರೆ ಒಪ್ಪಬಹುದಿತ್ತುಈ ಭಾರಿ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಸಿಗುತ್ತದೆ. ಇದು ಖಂಡಿತ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com