ಒಳ ಉಡುಪು ಬಿಚ್ಚಿಸಿದ್ದಾಯ್ತು…ಈಗ ಫುಲ್‌ ತೋಳಿಗೆ ಕತ್ತರಿ ಹಾಕಿದ ಮೇಲ್ವಿಚಾರಕರು !

ಪಾಟ್ನಾ : ಇತ್ತೀಚೆಗಷ್ಟೇ ನೀಟ್‌ ಪರೀಕ್ಷೆಯ ವೇಳೆ ಮೆಟಲ್‌ ಹುಕ್‌ ಇದ್ದ ಕಾರಣ ವಿದ್ಯಾರ್ಥಿನಿಯ ಒಳಉಡುಪು ಬಿಚ್ಚಿಸಿದ್ದ ಘಟನೆ ಹಸಿಯಾಗಿರುವಾಗಲೇ ಅಂತಹದ್ದೆ ಮತ್ತೊಂದು ಘಟನೆ ನಡೆದಿದೆ.

ಬಿಹಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದ ಮಹಿಳಾ ಅಭ್ಯರ್ಥಿಗಳ ಫುಲ್‌ ಸ್ಲೀವ್‌ಗೆ ಕತ್ತರಿ ಹಾಕಲಾಗಿದ್ದು, ಉದ್ದನೆ ತೋಳಿನ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ  ತೋಳನ್ನು ಕತ್ತರಿಸಲಾಗಿದೆ.

ಬಿಹಾರದ ಮುಜಫ್ಫರ್‌ ನಗರದಲ್ಲಿ ಈ ಘಟನೆ ನಡೆದಿದೆ. ನರ್ಸಿಂಗ್‌ ಎಂಟರೆನ್ಸ್‌ ಪರೀಕ್ಷೆಗೆ ವಿದ್ಯಾರ್ಥಿನಿಯರು ಬಂದಿದ್ದರು. ಈ ವೇಳೆ ಶಿಸ್ತಿನ ಕಾರಣಕ್ಕೆ ತೋಳನ್ನು ಕತ್ತರಿಸಲಾಗಿದೆ. ವಿದ್ಯಾರ್ಥಿನಿಯರ ತೋಳನ್ನು ಕತ್ತರಿಸುತ್ತಿರುವ ವಿಡಿಯೋ  ವೈರಲ್ ಆಗಿದೆ.

ಈ ಬಗ್ಗೆ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳು ದೂರು ನೀಡಿದ್ದು ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಮಂಡಳಿ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com