ಕೂಸು ಹುಟ್ಟೋಕೂ ಮುನ್ನ ಕುಲಾವಿ ಹೊಲಿಸಿದಂತೆ : ಫಲಿತಾಂಶಕ್ಕೂ ಮುನ್ನ ಪ್ರಮಾಣ ವಚನಕ್ಕೆ ಸ್ಟೇಡಿಯಂ ಬುಕ್‌ ಮಾಡಿದ BSY

ಬೆಂಗಳೂರು : ಕರ್ನಾಟಕದ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. ಇನ್ನೇನು ನಾಳೆ ಫಲಿತಾಂಶ ಹೊರಬರಲಿದ್ದು, ಈ ಕ್ಷಣಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.

ಆದರೆ ಬಿಜೆಪಿಯಲ್ಲಿ ಕುತೂಹಲಕರ ಬೆಳವಣಿಗೆಯೊಂದು ನಡೆದಿದ್ದು, ಫಲಿತಾಂಶಕ್ಕೂ ಮುನ್ನ ನಾನೇ ಸಿಎಂ ಆಗುತ್ತೇನೆ. ಮೇ 17ರಂದು ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ  ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ ಪ್ರಮಾಣ ವಚನ ಸ್ವೀಕಾರಕ್ಕೆ ಕಂಠೀರವ ಕ್ರೀಡಾಂಗಣವನ್ನು 2 ದಿನದ ಮಟ್ಟಿಗೆ ಬುಕ್‌ ಮಾಡಿಸಿದ್ದಾರಂತೆ. ಹೀಗಂತ ಏನ್‌ಸುದ್ದಿಗೆ ಬಲ್ಲ ಮೂಲಗಳು ಮಾಹಿತಿ ನೀಡಿವೆ.

ಬಿಜೆಪಿ ಅಭ್ಯರ್ಥಿ ಕಟ್ಟಾಸುಬ್ರಮಣ್ಯ ನಾಯ್ಡು ಅವರಿಗೆ ಯಡಿಯೂರಪ್ಪ ಕ್ರೀಡಾಂಗಣವನ್ನು ಬುಕ್‌ ಮಾಡುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.

ನಾಳೆ ಫಲಿತಾಂಶ ಬರಲಿದೆ. ಸಿಎಂ ಯಾರಾಗ್ತಾರೆ ಎಂಬುದು ಮಂಗಳವಾರವಷ್ಟೇ ತಿಳಿಯಲಿದೆ. ಆದರೆ ಫಲಿತಾಂಶಕ್ಕೂ ಮುನ್ನ  ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ  ಕ್ರೀಡಾಂಗಣ ಬುಕ್‌ ಮಾಡಿರುವುದು ಕುತೂಹಲ ಹೆಚ್ಚಿಸುತ್ತಿದೆ.

4 thoughts on “ಕೂಸು ಹುಟ್ಟೋಕೂ ಮುನ್ನ ಕುಲಾವಿ ಹೊಲಿಸಿದಂತೆ : ಫಲಿತಾಂಶಕ್ಕೂ ಮುನ್ನ ಪ್ರಮಾಣ ವಚನಕ್ಕೆ ಸ್ಟೇಡಿಯಂ ಬುಕ್‌ ಮಾಡಿದ BSY

Leave a Reply

Your email address will not be published.

Social Media Auto Publish Powered By : XYZScripts.com