ಚುನಾವಣೆಯಲ್ಲಿ ಗೆಲ್ಲೋದು ನಾವೇ, ಇದೇ ನನ್ನ ಬ್ಲಡ್‌ ಫೀಲಿಂಗ್‌ : ಜಿ.ಪರಮೇಶ್ವರ್‌

ತುಮಕೂರು : ಪ್ರಧಾನಿಯವರು ಉದ್ಯೋಗದ ಭರವಸೆ ನೀಡಿದ್ದರು. ಕಪ್ಪುಹಣ ವಾಪಾಸ್ ತರುತ್ತೇವೆ ಎಂದೂ ಭರವಸೆ ನೀಡಿದ್ದರು. ಆದರೆ ಅದು ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಅವರು ಕಾಂಗ್ರೆಸ್‌ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ರು. ವೈಯಕ್ತಿಕ ನೆಲೆಗಟ್ಟಲ್ಲಿ ಮುಖ್ಯಮಂತ್ರಿಯವರ ತೇಜೊವಧೆ ಮಾಡಿದ್ರು. ಆದರೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಜನ ತೀರ್ಮಾನ ತೆಗೆದುಕೊಂಡಿದ್ದಾರೆ. ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಕಾರ್ಯಕ್ರಮಗಳು ಮುಂದುವರಿಯಬೇಕು. ನಮ್ಮ ಯೋಜನೆಗಳು ಜನಮನ್ನಣೆ ಪಡೆದುಕೊಂಡಿದ್ದವು. ಈ ಯೋಜನೆಗಳು ಮುಂದುವರಿಯಬೇಕು ಅಂದ್ರೆ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕುಚುನಾವಣಾ ಪ್ರಚಾರ ಎಐಸಿಸಿ ಅಧ್ಯಕ್ಷರಿಂದ ನಾಲ್ಕು ಹಂತದ ಪ್ರವಾಸ ಮಾಡಿದ್ದೇವೆ. ಕರ್ನಾಟಕದ  ಜನ ಕಾಂಗ್ರೆಸ್ ಗೆ ಅಧಿಕಾರ ಕೊಡುತ್ತಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದಿದ್ದಾರೆ.

ಮಾಧ್ಯಮಗಳ ಬಹುತೇಕ ಸರ್ವೇ ನಮ್ಮನ್ನ ಎರಡನೇ ಸ್ಥಾನದಲ್ಲಿ ತೋರಿಸಿಲ್ಲ.ನಾವು ಸರ್ಕಾರ ಮಾಡ್ತೇವೆ.ಇದು ನನ್ನ ಬ್ಲಡ್ ಫೀಲಿಂಗ್ ಎಂದಿರುವ ಪರಮೇಶ್ವರ್‌, ಕೇವಲ ತೋರ್ಪಡಿಕೆಯ ಮಾತಲ್ಲ. ಬಲ್ಲ ಮೂಲಗಳ ಪ್ರಕಾರ ನಮಗೆ ಬಹುಮತ ಸಿಗಲಿದೆ. ಜನ ಒಳ್ಳೆಯ ಆಡಳಿತ ಬಯಸ್ತಿದ್ದಾರೆ. ಚುನಾವಣೆ ಫಲಿತಾಂಶ ಅತಂತ್ರ ಆದ್ರೆ ಆಡಳಿತ ನಡೆಸೋದು ಕಷ್ಟ ಅನ್ನೋದು ಜನಸಾಮಾನ್ಯರಿಗೆ ಗೊತ್ತಿದೆ. ಎಲ್ಲಾ ಆಧಾರಗಳ ಮೇಲೆ ನಾವು 120 ಸ್ಥಾನಕ್ಕೂ ಅಧಿಕ ಸೀಟು ಪಡೆಯುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com