Bihar : ದಾಂಪತ್ಯಕ್ಕೆ ಕಾಲಿಟ್ಟ ಲಾಲೂ ಪುತ್ರ ತೇಜ್ ಪ್ರತಾಪ್ – ಐಶ್ವರ್ಯಾ ರಾಯ್

ಪಾಟ್ನಾದಲ್ಲಿ ಶನಿವಾರ ನಡೆದ ಮದುವೆ ಸಮಾರಂಭದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಆರ್ ಜೆಡಿ ಶಾಸಕಿ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ರಾಯ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿವಾಸ ಮಹೋತ್ಸವಕ್ಕೆ ಬಿಹಾರದ ಸದ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು, ಸಂಬಂಧಿಕರು ಹಾಗೂ ಅತಿಥಿಗಳು ಆಗಮಿಸಿ ನವವಿವಾಹಿತರಿಗೆ ಆಶೀರ್ವದಿಸಿದ್ದಾರೆ. ವಿವಾಹ ಸಮಾರಂಭ ಪಾಟ್ನಾದ ವೆಟರ್ನರಿ ಕಾಲೇಜು ಮೈದಾನದಲ್ಲಿ ನಡೆಯಿತು.

ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್ ಪೆರೋಲ್ ಮೇಲೆ ಹೊರಬಂದು ಪುತ್ರನ ಮದುವೆಗೆ ಹಾಜರಾದರು. ತೇಜ್ ಪ್ರತಾಪ್ ಮದುವೆಗೆ ಬಿಹಾರದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಸಮಾಜವಾದಿ ನೇತಾರ ಶರದ್ ಯಾದವ್ ಆಗಮಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com