ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ವೀಕೆಂಡ್ ಎಂಜಾಯ್ ಮಾಡಿ : ಕಾರ್ಯಕರ್ತರಿಗೆ ಸಿಎಂ ಕರೆ
ಮೈಸೂರು : ರಾಜ್ಯ ಚುನಾವಣೆ ಬೆನ್ನಲ್ಲೇ ಖಾಸಗಿ ಸುದ್ದಿ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ರಾಜಕೀಯ ನಾಯಕರನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದು, ಫಲಿತಾಂಶ ಹೊರ ಬರುವವರೆಗೂ ಇದೊಂದು ಮನರಂಜನೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ” ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ , ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನೀವು ನನ್ನಂತೆ ದಣಿದಿದ್ದೀರಿ ಎಂದು ಗೊತ್ತು. ಚುನಾವಣೋತ್ತರ ಸಮೀಕ್ಷೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಕುಟುಂಬದ ಜತೆ ವಾರಾಂತ್ಯದ ರಜೆಯನ್ನು ಕಳೆಯಿರಿ.
ಮೇ 15 ರಂದು ಸಿಗೋಣ, ಹಿರಿಯರ ಆಶೀರ್ವಾದ ಮತ್ತು ಕಿರಿಯರ ಹಾರೈಕೆಯಿಂದ ಒಳ್ಳೆಯದೇ ಆಗುತ್ತದೆ, ಆರಾಮಾಗಿರಿ” ಎಂದು ಟ್ವೀಟ್ ಮಾಡಿದ್ದಾರೆ.
So, Dear party workers, supporters & well wishers, don’t worry about exit polls. Relax & enjoy your weekend.
We are coming back. 2/2
— Siddaramaiah (@siddaramaiah) May 13, 2018