WATCH : ಮ್ಯಾಚ್ ನಡುವೆಯೇ ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ..!

ದೆಹಲಿಯ ಫೀರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ 5 ವಿಕೆಟ್ ಜಯಗಳಿಸಿತು. ಡೆಲ್ಲಿ ನೀಡಿದ್ದ 182 ಟಾರ್ಗೆಟ್ ಅನ್ನು 19 ಓವರುಗಳಲ್ಲಿ ಚೇಸ್ ಮಾಡಿದ ಆರ್ಸಿಬಿ ಗೆದ್ದು ಬೀಗಿತ್ತು.

ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 73 ರನ್ ಬಾರಿಸಿದ್ದರು. 40 ಎಸೆತಗಳನ್ನೆದುರಿಸಿದ ಕೊಹ್ಲಿ 7 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದರು. ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಂಗ್ ವೇಳೆಯಲ್ಲಿ ಅಭಿಮಾನಿಯೊಬ್ಬ ರಕ್ಷಣಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನದೊಳಗೆ ನುಗ್ಗಿದ್ದಾನೆ.

ಆಗ ಕ್ರೀಸ್ ನಲ್ಲಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯ ಪಾದಕ್ಕೆರಗಿದ್ದಾನೆ, ನಂತರ ಯುವಕ ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಜೊತೆಗೆ ಸೆಲ್ಫೀಯನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾನೆ. ಮೈದಾನದ ರಕ್ಷಣಾ ಸಿಬ್ಬಂದಿ ಓಡೋಡಿ ಬಂದು ಯುವಕನನ್ನು ಹೊರಗೆ ಕಳುಹಿಸಿ ಪಂದ್ಯ ಮುಂದುವರೆಯಲು ಅನುವು ಮಾಡಿಕೊಟ್ಟರು.

Leave a Reply

Your email address will not be published.

Social Media Auto Publish Powered By : XYZScripts.com