ನಾನು ದಲಿತ ಎಂಬ ಕಾರಣಕ್ಕೆ ನನಗೆ ಸಿಎಂ ಹುದ್ದೆ ಕೊಡೋದಾದ್ರೆ ನನಗೆ ಆ ಸ್ಥಾನ ಬೇಡ : ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ : ಕಾಂಗ್ರೆಸ್‌ ಪಕ್ಷದ ಹಿರಿಯ ಅಥವಾ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎನಿಸಿದರೆ ಮಾತ್ರ ನನಗೆ ಸಿಎಂ ಹುದ್ದೆ ಕೊಡಲಿ. ನಾನು ದಲಿತ ಎಂಬ ಕಾರಣಕ್ಕೆ ನನಗೆ ಆ ಪದವಿ ಬೇಕಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದು ಬೆಳಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕೊಡಲು ಹೈಕಮಾಂಡ್‌ ನಿರ್ಧರಿಸಿದರೆ ನನ್ನದೇನೂ ತಕರಾರಿಲ್ಲ. ದಲಿತರಿಗಾಗಿ ಸಿಎಂ ಪಟ್ಟ ತ್ಯಾಗ ಮಾಡುವುದಾಗಿ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಖರ್ಗೆ, ನಾನೆಂದೂ ದಲಿತ ಎಂದು ಸಿಎಂ ಪಟ್ಟಕ್ಕೆ ಅರ್ಜಿ ಸಲ್ಲಿಸಿಲ್ಲ. ನಾನು ಕಾಂಗ್ರೆಸ್‌ನಲ್ಲಿ ನಿಷ್ಠಾವಂತನಾಗಿ ದುಡಿದಿದ್ದೇನೆ. ಹಿರಿಯ ನಾಯಕ ಎಂದೋ ಅಥವಾ ಪಕ್ಷದ ನಿಷ್ಠಾವಂತನೆದೋ ಸಿಎಂ ಪದವಿ ಕೊಡಲಿ. ಅದನ್ನು ಬಿಟ್ಟು ದಲಿತ ಎಂಬ ಕಾರಣಕ್ಕೆ ಸಿಎಂ ಸ್ಥಾನ ಕೊಡುವುದು ಬೇಡ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com