ಇಂಡೋನೇಷ್ಯಾ : ಚರ್ಚ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ : 11 ಜನರ ಸಾವು

ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ ನಗರವಾದ ಸುರಬಾಯಾದಲ್ಲಿ ಭಾನುವಾರ ಚರ್ಚ್ ಗಳ ಮೇಲೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, 11 ಜನರು ಮೃತಪಟ್ಟು 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದು ಇಂಡೋನೇಷ್ಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಭೀಕರ ಭಯೋತ್ಪಾದಕ ದಾಳಿಯಾಗಿದೆ. ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಗಳೂ ಹೊತ್ತುಕೊಂಡಿಲ್ಲ.

ಇಂದು ಬೆಳಿಗ್ಗೆ 7.30 ರ ಸುಮಾರಿಗೆ ಮೂರು ಚರ್ಚ್ ಗಳ ಮೇಲೆ ಬಾಂಬ್ ದಾಳಿಗಳು ನಡೆದಿವೆ. ಸಿಸಿಟಿವಿ ಫುಟೇಜ್ ನಲ್ಲಿ, ಸ್ಫೋಟ ಸಂಭವಿಸುವ ಸ್ವಲ್ಪ ಹೊತ್ತಿಗೆ ಮುನ್ನ ಚರ್ಚ್ ಆವರಣದೊಳಗೆ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್ ಮೇಲೆ ಒಳಗೆ ಹೋಗಿರುವುದು ಕಂಡುಬಂದಿದೆ.

Image result for indonesia church bomb

ಇನ್ನೊಂದು ಚರ್ಚ್ ನಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಆಗಮಿಸಿದ ಮುಸುಕುಧಾರಿ ಮಹಿಳೆಯೊಬ್ಬಳು ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾಳೆ. ಆಕೆಯ ಜೊತೆಗಿದ್ದ ಮಕ್ಕಳಿಗೆ ಏನಾಯಿತೆಂಬುದೂ ಸಹ ತಿಳಿದು ಬಂದಿಲ್ಲ.

 

Leave a Reply

Your email address will not be published.