ಮೋದೀಜಿ ಜನರ ದಿಕ್ಕು ತಪ್ಪಿಸಬೇಡಿ, ಜನ ನಿಮ್ಮನ್ನು ನಂಬುತ್ತಾರೆ, ಈಗಲಾದರೂ ತಿದ್ದಿಕೊಳ್ಳಿ : ಬಿಜೆಪಿ ಸಂಸದ !

ದೆಹಲಿ : ಪ್ರಧಾನಿ ಮೋದಿ ವಿರುದ್ದ ಬಿಜೆಪಿ ಸಂಸಂದ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.

ಮೋದಿ ವಿರುದ್ಧ ಟ್ವೀಟ್‌ಗಳ ಸುರಿಮಳೆ ಸುರಿಸಿರುವ ಸಿನ್ಹಾ, 130 ಕೋಟಿ ಭಾರತೀಯರ ಪ್ರಧಾನಿಯಾಗುವುದೆಂದರೆ, ಇತರ ಪಕ್ಷಗಳ ಹೆಸರುಗಳನ್ನು ಟೀಕಿಸುವುದಲ್ಲ. ಪ್ರಧಾನಿ ಮಾತನಾಡುವಾಗ ನರ್ಸರಿ ಮಕ್ಕಳಿಗೆ ಅಕ್ಷರಮಾಲೆ ಹೇಳಿಕೊಟ್ಟಂತೆ ಭಾಸವಾಗುತ್ತದೆ.  ಪ್ರಧಾನಿಯವರೇ, ಇದು ದೇಶ, ಶಾಲೆಯಲ್ಲ, ಎಂದು ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.

ಪಿಪಿಪಿ ಎಂಬ ಸಂಕೇತರಗಳು ಬಹಳ ಕ್ಷುಲ್ಲಕ ವಿಷಯಗಳು, ಇಂತಹವುಗಳನ್ನು ಬಳಸಿ ನೀವೂ ಚಿಕ್ಕವರಾಗಿದ್ದೀರಿ, ಈ ರೀತಿ ಮಾತನಾಡುವುದನ್ನು ಬಿಟ್ಟು ಜನರ ಮನಗೆಲ್ಲುವ ಪ್ರಯತ್ನ ಮಾಡಬೇಕು ಎಂದಿದ್ದಾರೆ.

ನಿಮ್ಮಿಂದ ಜನ ಪ್ರಬುದ್ಧ ಭಾಷಣಗಳನ್ನು ಕೇಳ ಬಯಸುತ್ತಾರೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಪ್ರಧಾನಿಯಾಗಲು ಬಯಸಿದರೆ ತಪ್ಪೇನು ಎಂದು ಪ್ರಶ್ನಿಸಿರುವ ಸಿನ್ಹಾ, ಪ್ರಜಾತಂತ್ರದಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು ಎಂದು ರಾಹುಲ್‌ ಗಾಂಧಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ರಾಹುಲ್‌ ಗಾಂಧಿ ಪ್ರಬುದ್ಧರಾಗಿದ್ದಾರೆ. ಮುಖ್ಯವಾದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.  ಆದರೆ ಅವುಗಳಿಗೆ ನಾವು ಉತ್ತರ ನೀಡುತ್ತಿಲ್ಲ. ಆದರೆ ನಾವು ನಮ್ಮಲ್ಲಿರುವ ವಿಷಯಗಳನ್ನೇ ಮಾತಿನ ಕಲೆ, ವಿಷಯಾಂತರದ ಕಲೆಯ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದೇವೆ ಎಂದಿದ್ದಾರೆ.

ನಿಮ್ಮ ಸಲಹೆಗಾರರಿಗೆ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಸುಳ್ಳುಗಳನ್ನು ಹರಡುವುದರಲ್ಲಿ ನಿಸ್ಸೀಮರಾಗುತ್ತಿದ್ದೀರಿ. ಮೋದೀಜಿ ನಿಮ್ಮ ಬಗ್ಗೆ ಗೌರವವಿದೆ. ಜನರಿಗೆ ವಿಶ್ವಾಸವಿದೆ. ಈಗಲಾದರೂ ತಿದ್ದಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

Leave a Reply

Your email address will not be published.