ಕಾಂಗ್ರೆಸ್‌ನ ರೌಡಿ ಕಾರ್ಪೋರೇಟರ್‌ ಅರೆಸ್ಟ್‌ : ಕಾಲರ್‌ ಹಿಡಿದು ರಸ್ತೆಯಲ್ಲೇ ಎಳೆದೊಯ್ದ ಪೊಲೀಸರು

ದಾವಣಗೆರೆ : ನಗರದ ರೌಡಿ ಕಾರ್ಪೋರೇಟರ್‌ನನ್ನು ಪೊಲೀಸರು ಬಂಧಿಸಿ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿದ ಘಟನೆ ನಡೆದಿದೆ. ದಾವಣಗೆರೆ ಕಾಂಗ್ರೆಸ್ ಕಾರ್ಪೋರೇಟರ್‌ ಶ್ರೀನಿವಾಸ್ ಆಲಿಯಾಸ್ ಮೋಟ್ ಬಳ್ ಸೀನನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮತದಾನ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರ ಮೇಲೆ ಶ್ರೀ‌ನಿವಾಸ್ ಹಲ್ಲೆ ಮಾಡಿದ್ದ. ಈ ಸಂಬಂಧ ಮಾಜಿ ಸಚಿವ ರವೀಂದ್ರನಾಥ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ‌ ಆದಾರದ ಮೇಲೆ ಕಾರ್ಪೋರೇಟರ್ ಶ್ರೀನಿವಾಸ್ ನನ್ನು ಬಂಧಿಸಿದ್ದು ಕೈ ಕಟ್ಟಿ ಕಾಲರ್ ಹಿಡಿದು ರಸ್ತೆಯಲ್ಲಿ ಮರವಣಿಗೆ ಮಾಡಿದ್ದಾರೆ.

ಕಾಲರ್ ಹಿಡಿದು ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published.