ರೋಣ : ಬಿಜೆಪಿಗೆ ಮತ ಹಾಕಲ್ಲ ಅಂದ ದಲಿತರ ಮೇಲೆ BJP ಕಾರ್ಯಕರ್ತರಿಂದ ಹಲ್ಲೆ..!

ಮತದಾನ ನಮ್ಮ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಮತ ಯಾವ ಪಕ್ಷಕ್ಕಾದ್ರೂ ಚಲಾಯಿಸಬಹುದು. ಆದರೆ ಇಲ್ಲಿ ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಮತ ಹಾಕುವಂತೆ ಒತ್ತಾಯಿಸಿದ್ದಾರೆ. ಆ ಪಕ್ಷಕ್ಕೆ ಮತ ಹಾಕದ್ದಕ್ಕೆ ಆರು ಜನ ದಲಿತರನ್ನು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ‌. ರಾಷ್ಟ್ರೀಯ ಪಕ್ಷದ ಗೂಂಡಾಗಿರಿಗೆ ಆರು ಜನ ದಲಿತರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.

ಬಿಜೆಪಿ ಪಕ್ಷಕ್ಕೆ ಮತ ಹಾಕದ್ದಕ್ಕೆ ದಲಿತರಿಗೆ ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಇಬ್ಬರು ದಲಿತರನ್ನು ಮೂರು ಗಂಟೆ ಅಕ್ರಮ ಗೃಹಬಂಧನ ಇಟ್ಟಿದ್ದಾರೆ. ಬಿಜೆಪಿ ಗೂಂಡಾಗಿರಿಗೆ ಆಸ್ಪತ್ರೆಯಲ್ಲಿ ಯುವಕರ ನರಳಾಡುವಂತಾಗಿದೆ. ಹೀಗೆ ಕೈಗೆ ಸಿಕ್ಕವರನ್ನು ಮನಬಂದಂತೆ ಥಳಿಸುತ್ತಿರುವ ಅಮಾನವೀಯ ಘಟನೆ ನಡೆದದ್ದು, ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ.

Image result for bjp voting machine

ನಿನ್ನೆ ಗ್ರಾಮದ ಮತಗಟ್ಟೆ ಬಳಿಯೇ ಬಿಜೆಪಿಗೆ ಮತ ಹಾಕುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಗೆ ಮತ ಹಾಕಲ್ಲ ಅಂದಿದ್ದಕ್ಕೆ ಆರು ಜನ ದಲಿತರ ಮೇಲೆ ಬಿಜೆಪಿಯ ಮುಖಂಡರು ಹಿಗ್ಗಾಮುಗ್ಗಾ ಥಳಿಸಿರೋ ಆರೋಪ ಎದುರಿಸುತ್ತಿದ್ದಾರೆ. 6 ಜನರಲ್ಲಿ ಇಬ್ಬರನ್ನು ಮನೆಯಲ್ಲಿ ಕೂಡಿ ಹಾಕಿದ್ದರು ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಗಾಯಾಳುಗಳಾದ ಶರಣಪ್ಪ ಕೊಳಪ್ಪನವರ, ದೇವೆಂದ್ರ ಕೊಳಪ್ಪನವರ, ಬಸವರಾಜ ಅಗಸಿಮನಿ, ದೇವಪ್ಪ ತಾಳದವರ, ಗದಿಗೆಪ್ಪ ಹೆಬಸೂರು ಹಾಗೂ ಅಶೋಕ ತಾಳದವರ ಅವರನ್ನು ಚಿಕಿತ್ಸೆಗಾಗಿ ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆಯಲ್ಲಿ ಹಲ್ಲೆಗೊಳಗಾದವರಿಗೆ ಮೈತುಂಬ ಬಾಸುಂಡೆ ಬಂದಿದ್ದು ಬಿಜೆಪಿ ಮುಖಂಡರ ವಿರುದ್ಧ ಹಲ್ಲೆಗೊಳಗಾದವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯಾವಗಲ್ ಗ್ರಾಮದ ಬಿಎಂಟಿಸಿ ನೌಕರ ಬಸನಗೌಡ ಪೊಲೀಸ್ ಪಾಟೀಲ್, ಮಲಕಾಜ್ ಗೌಡ, ಮುತ್ತನಗೌಡ ಸೇರಿದಂತೆ ಎಂಟು ಬಿಜೆಪಿ ಮುಖಂಡರು, ಈ ಆರು ಜನ ದಲಿತರನ್ನು ಮನ ಬಂದಂತೆ ಥಳಿಸಿ ಮನೆಯಲ್ಲಿ‌ ಮೂರು ಗಂಟೆ ಅಕ್ರಮ ಗೃಹ ಬಂಧನದಲ್ಲಿ ಇಟ್ಟಿದ್ದಾರೆ ಅಂತ ದಲಿತರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಇಡಿ ದಲಿತ ಕೇರಿಯನ್ನೇ ಸುಟ್ಟು ಹಾಕೋದಾಗಿ ಬೆದರಿಕೆ ಹಾಕಿದ್ದಾರೆಂದು ಥಳಿತಕ್ಕೊಳಗಾದವರು ಆರೋಪಿಸ್ತಿದ್ದಾರೆ. ಮೂರು ಗಂಟೆಗಳ ಕಾಲ ಗೃಹಬಂಧನದಲ್ಲಿದ್ದ ಯುವಕರು ರಾತ್ರಿ ಪೊಲೀಸರು ಗ್ರಾಮಕ್ಕೆ ಬಂದ ನಂತರ ಅವ್ರ ರಕ್ಷಣೆಯಲ್ಲಿ ಹೊರಬಂದಿದ್ದಾರೆ. ಸದ್ಯ ಬಹುತೇಕ ದಲಿತರು ಗ್ರಾಮ ತೊರೆದಿದ್ದು, ಗ್ರಾಮದಲ್ಲೀಗ ಭಯದ ವಾತಾವರಣವಿದ್ದು. ಪೊಲೀಸರು ‌ಬೀಡು ಬಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com