ವೋಟ್‌ ಮಾಡದ ರಮ್ಯಾಗೆ ಟ್ವೀಟ್‌ ಮೂಲಕ ತರಾಟೆ ತೆಗೆದುಕೊಂಡ ಪ್ರಜೆಗಳು

ಬೆಂಗಳೂರು : ಎಐಸಿಸಿ ಸೋಶಿಯಲ್‌ ಮೀಡಿಯಾದ ಅಧ್ಯಕ್ಷೆ, ಮಾಜಿ ಸಂಸದೆ ರಮ್ಯಾ ಈ ಬಾರಿ ಮತದಾನ ಮಾಡಿಲ್ಲವಂತೆ. ಅದಕ್ಕೆ ರಮ್ಯಾ ಅವರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ಮೇ 12ರಂದು ಪ್ರಜ್ಞಾವಂತ ಮತದಾರರು ಮತದಾನ ಮಾಡಿ ಜವಾಬ್ದಾರಿ ಮೆರೆದಿದ್ದಲ್ಲದೆ, ಯುವಕರಿಂದ ಮುದುಕರವರೆಗೂ ವೋಟ್ ಮಾಡಿದ್ದಾರೆ. ಕೈಲಾಗದ ಸ್ಥಿತಿಯಲ್ಲಿದ್ದವರೂ ಇನ್ನೊಬ್ಬರ ಸಹಾಯದಿಂದ ಬಂದು ಮತದಾನ ಮಾಡಿದ್ದಾರೆ. ಆದರೆ ರಮ್ಯಾ ಮಾತ್ರ ಮತದಾನ ಮಾಡಿಲ್ಲ. ಇದನ್ನು ಗಮನಿಸಿರುವ ಟ್ವಿಟರಿಗರು ರಮ್ಯಾ ಅವರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ವೋಟ್‌ ಮಾಡದ ನೀವು ಯಾವ ಸೀಮೆ ರಾಜಕಾರಣಿ, ವೋಟ್‌ ಮಾಡದ ನಿಮಗೆ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಪ್ರಧಾನಿಯವರ ಮಾರ್ಕ್ಸ್‌ಕಾರ್ಡ್‌ ಬಿಡುಗಡೆ ಮಾಡಿದ ನೀವು ವೋಟ್‌ ಮಾಡಿಲ್ಲವೆಂದರೆ ನಾಚಿಕೆಯಾಗಬೇಕು ಎಂದೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com