ಲವ್‌ ಮ್ಯಾರೇಜ್‌ ಆದ ಹುಚ್ಚ ವೆಂಕಟ್‌-ಐಶು : ಪ್ಲೀಸ್‌ ನಮ್ಮಿಬ್ರನ್ನೂ ದೂರ ಮಾಡ್ಬೇಡಿ ಎಂದ ಫೈರಿಂಗ್‌ ಸ್ಟಾರ್‌

ಬೆಂಗಳೂರು : ಆರ್‌ ಆರ್‌ ನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿರುವ ನಟ, ಫೈರಿಂಗ್‌ ಸ್ಟಾರ್‌ ಹುಚ್ಚ ವೆಂಕಟ್‌ ಮದುವೆಯಾಗಿದ್ದಾರೆ. ಈ ಕುರಿತು ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಲೈವ್‌ ಬಂದಿದ್ದು, ತಾನು ಮತ್ತೊಂದು ಮದುವೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಐಶ್ವರ್ಯ ಎಂಬ ಯುವತಿ ಜೊತೆ ವೆಂಕಟ್‌ ಮದುವೆಯಾಗಿದ್ದಾರೆ.  ವೆಂಕಟ್‌, ನಟಿಸಿ, ನಿರ್ದೇಶನ ಮಾಡುತ್ತಿರುವ  ಡಿಕ್ಟೇಟರ್‌ ಹುಚ್ಚ ವೆಂಕಟ್‌ ಸಿನಿಮಾದಲ್ಲಿ ಐಶ್ವರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ವಾರ ನಾನು ತಲಕಾವೇರಿಯಲ್ಲಿ ಐಶ್ವರ್ಯ ಅವರನ್ನು ಮದುವೆಯಾಗಿದ್ದೇನೆ.   ಮದುವೆಯ ಬಳಿಕ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡಿದ್ದರು. ಆದ್ದರಿಂದ ಮದುವೆ ವಿಚಾರವನ್ನು ಎಲ್ಲರಿಂದ ಮುಚ್ಚಿಟ್ಟಿದ್ದೆವು. ನಾನು ಐಶ್ವರ್ಯ ಪ್ರೀತಿಸಿ ಮದುವೆಯಾಗಿದ್ದೇವೆ. ಇದಕ್ಕೆ ನಮ್ಮ ಮನೆಯಲ್ಲಿ ವಿರೋಧವಿದೆ. ಮದುವೆಯಾದ ಬಳಿಕ ಆಶಿರ್ವಾದ ಪಡೆಯಲು  ಮನೆಗೆ ಫೋನ್‌ ಮಾಡಿದ್ದೆ ಆಗ ದೊಡ್ಡಮ್ಮ ತೀರಿಕೊಂಡ ವಿಚಾರ ಗೊತ್ತಾಯಿತು. ಆದ್ದರಿಂದ ಮದುವೆ ವಿಚಾರ ತಿಳಿಸಿರಲಿಲ್ಲ ಎಂದಿದ್ದಾರೆ.

ಇದೇ ವೇಳೆ ಭಾವನಾತ್ಮಕವಾಗಿ ಮಾತನಾಡಿರುವ ವೆಂಕಟ್‌  ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದೇವೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮಿಬ್ಬರನ್ನು ದಯವಿಟ್ಟು ಯಾರೂ ದೂರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published.