HDK ಸಿಂಗಾಪುರ ಪ್ರವಾಸಕ್ಕೆ ಟ್ವಿಸ್ಟ್‌ : ಕೈ ಜೊತೆ ಸೇರಲು JDS ಪ್ಲಾನ್‌ : ಮುಂದಿನ CM ಆಗ್ತಾರಂತೆ H.C ಮಹದೇವಪ್ಪ ?

ಬೆಂಗಳೂರು : ಚುನಾವಣೆ ಮುಗಿದ ಬಳಿಕ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಸಲುವಾಗಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿತ್ತು.

ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚಿಸಲು ಪ್ಲಾನ್‌ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಈ ಬಾರಿ ಎಚ್‌. ಸಿ ಮಹದೇವಪ್ಪ ಅವರು ಸಿಎಂ ಆಗಲಿದ್ದಾರಂತೆ. ಇದರಿಂದ ಮುನಿಸಿಕೊಂಡಿರುವ  ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಮೂಲಗಳು ಏನ್‌ಸುದ್ದಿಗೆ ಮಾಹಿತಿ ನೀಡಿವೆ. ಚುನಾವಣೆಯ ಬಳಿಕ ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದು,  ಮಹದೇವಪ್ಪ ಸಿಎಂ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಫಲಿತಾಂಶದ ಬಳಿಕವಷ್ಟೇ ಎಲ್ಲಾ ವಿಚಾರಗಳೂ ಬೆಳಕಿಗೆ ಬರಲಿದೆ.

Leave a Reply

Your email address will not be published.

Social Media Auto Publish Powered By : XYZScripts.com