ಸಿಎಂ ಆಗೋದು ನಾನೇ, ಮೋದಿ ಜೊತೆ ಚರ್ಚಿಸಿ ಪ್ರಮಾಣವಚನದ ಡೇಟ್‌ ಫಿಕ್ಸ್ ಮಾಡ್ತೀನಿ : ಯಡಿಯೂರಪ್ಪ

ಬೆಂಗಳೂರು : ಈ ಬಾರಿ  ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ನಾನು ಮುಖ್ಯಮಂತ್ರಿ ಆಗುವುದೂ ಖಚಿತ. ಪ್ರಧಾನಿ ಮೋದಿಯವರ ಜೊತೆ ಚರ್ಚಿಸಿ ನನ್ನ ಪ್ರಮಾಣ ವಚನದ ಡೇಟ್ ಫಿಕ್ಸ್ ಮಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ 7 ಕ್ಷೇತ್ರಗಳಿಗೆ ಪ್ರವಾಸ ಮಾಡಿದ್ದೇನೆ. ನನಗೆ ನನ್ನದೇ ಆದ ಲೆಕ್ಕಾಚಾರವಿದೆ. 130 ಕ್ಷೇತ್ರಗಳನ್ನು ಗೆಲ್ಲುವ ಪಟ್ಟಿ ನನ್ನ ಬಳಿ ಇದೆ. ನಾನು ಸಿಎಂ ಆಗಿಯೇ ಆಗುತ್ತೇನೆ. ಮೇ 15ರಂದು ಪ್ರಧಾನಿ ಭೇಟಿ ನೀಡಿ ಪ್ರಮಾಣ ವಚನ ದಿನಾಂಕ ನಿಗದಿ ಮಾಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್​ ಯಾವ ಕಾರಣಕ್ಕೂ 70 ಸೀಟು ಗೆಲ್ಲಲ್ಲ. ಬಿಜೆಪಿ 130, ಜೆಡಿಎಸ್​ 22 ಸೀಟು ಗೆಲ್ಲಲಿದೆ. ಸಿದ್ದರಾಮಯ್ಯನವರ ಕಾಲ ಮುಗಿದಿದೆ. ಜನ ವಿರೋಧಿ ನೀತಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಸಿಎಂ ಆದ ಬಳಿಕ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published.