ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ, ಸಿದ್ದರಾಮಯ್ಯ ಅತಂತ್ರರಾಗ್ತಾರೆ, ಇದು ಸತ್ಯ : ಶ್ರೀರಾಮುಲು

ಬಳ್ಳಾರಿ : ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ.  ಮೂರು ಸಮೀಕ್ಷೆಗಳು ನಮ್ಮ ಪರ ಇದ್ದರೆ, ಇನ್ನೂ ಮೂರು ಸಮೀಕ್ಷೆಗಳು ಕಾಂಗ್ರೆಸ್ ಪರ ಇವೆ. ಈಗಾಗಲೇ ನಮ್ಮ ಸರ್ಕಾರಗಳಿರುವ ರಾಜ್ಯಗಳಲ್ಲಿ ಚುನಾವಣೆ ಪೂರ್ವ ಸಮೀಕ್ಷೆಗಳು ತಲೆಕೆಳಗಾಗಿದ್ದವು. ಕರ್ನಾಟಕದಲ್ಲೂ ಎಲ್ಲಾ ಸಮೀಕ್ಷೆಗಳು ತೆಲೆಕೆಳಗಾಗುತ್ತವೆ. ನಮ್ಮ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.

ನಮ್ಮ ಪ್ರಣಾಳಿಕೆಗಳ ಬಗ್ಗೆ ಜನ್ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ತಳಮಟ್ಟದಿಂದ ಕೆಲಸ ಮಾಡಿರುವ ಹಿನ್ನಲೆಯಲ್ಲಿ ಈ ಪ್ರಣಾಳಿಕೆ ನಂತರ ನಮ್ಮ ವೋಟ್ ಗಳು ರೈಸ್ ಆಗಿವೆ.  ಪ್ರಣಾಳಿಕೆ ಜನರಿಗೆ ಇಷ್ಟವಾಗಿದೆ. ವಿಶೇಷವಾಗಿ ನೀರಾವರಿ, ಸಾಲಾಮನ್ನಾ, ಶಿಕ್ಷಣದ ಗುರಿ ಉತ್ತಮ ಕೆಲಸ ಮಾಡಿದೆ. ಪ್ರಣಾಳಿಕೆಯಿಂದ ೧೦% ಮತಗಳು ನಮಗೆ ಜಂಪ್ ಆಗಿದೆ. ನಾವೇ ಬಹುಮತದಿಂದ 120 ಕ್ಕೂ ಹೆಚ್ಚು ಸ್ಥಾನದಿಂದ ಗೆಲ್ಲುವುದಾಗಿ ಹೇಳಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವೆ ಎಂದಿರುವ  ಶ್ರೀರಾಮುಲು, ಬದಾಮಿಯಲ್ಲಿ ಬನಶಂಕರಿ ಆಶಿರ್ವಾದದಿಂದ ಗೆಲ್ಲುತ್ತೇನೆ. ಈಗ ಸಿದ್ದರಾಮಯ್ಯ ಅವರಿಗೆ ದಲಿತರು ನೆನಪಾಗಿದ್ದಾರೆ. ಇಷ್ಟು ದಿನ ಅಹಂಕಾರ,ಅಹಂನಿಂದ ನಾನೇ ಸಿಎಂ ಎನ್ನುತ್ತಿದ್ದರು. ಸೋಲಿನ ಹತಾಶೆಯಿಂದ ಇದೀಗ ರಾಗ ಬದಲಾಯಿಸಿದ್ದಾರೆ. ಸಿಎಂ ಎರಡು ಕ್ಷೇತ್ರ ಸೋತ ಬಳಿಕ ರಾಜಕೀಯ ಭವಿಷ್ಯ ಅತಂತ್ರವಾಗುತ್ತದೆ. ಆಗ ಕೇವಲ‌ ಸಲಹೆ ನೀಡಲು ಮಾತ್ರ ಉಪಯೋಗಕ್ಕೆ ಬರುತ್ತಾರೆ. ಸಮೀಕ್ಷೆ‌ ಫಲಿತಾಂಶ ಬಳಿಕ ಸಿಎಂ ನಾಟಕ ಮಾಡುತ್ತಿದ್ದಾರೆ. ಸೋಲಿನ ಭೀತಿಯಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿರುವುದಾಗಿ  ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com