ಹೆರಿಗೆ ನೋವಲ್ಲೂ ಮತದಾನ ಮಾಡಿ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಯಾದಗಿರಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ತುಂಬು ಗರ್ಭಿಣಿಯೊಬ್ಬರು ಮತದಾನ ಕೇಂದ್ರಕ್ಕೆ ಬಂದಿದ್ದು, ಮತದಾನ ಮಾಡಿದ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ. ಯಾದಗಿರಿಯ ಜಿಲ್ಕೆ ಸುರಪುರ ತಾಲೂಕಿನ ಕೊಡೆಕಲ್ ವ್ಯಾಪ್ತಿಯ ಬೈಲುಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮತ್ತೊಂದೆಡೆ  ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮತದಾನ ನಡೆಯುತ್ತಿತ್ತು. ಈ ವೇಳೆ ಸಾವಿತ್ರಿ ಎಂಬ ಹೆಸರಿನ ಮಹಿಳೆ ಮತದಾನಕ್ಕೆ ಆಗಮಿಸಿದ್ದರು. ಮತ ಚಲಾಯಿಸಿ ಬಳಿಕ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೆ ಮತದಾನ ಕೇಂದ್ರದಲ್ಲಿದ್ದ ಚುನಾವಣಾ ಸಿಬ್ಬಂದಿ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಬಳಿಕ ಸಮೀಪದ ಕುಂದಗೋಳ ತಾಲ್ಲೂಕು ಆಸ್ಪತ್ರೆಗೆ  ದಾಖಲಿಸಲಾಗಿದೆ.

 

 

Leave a Reply

Your email address will not be published.