ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನನ್ನದೇನೂ ತಕರಾರಿಲ್ಲ : ಜಿ. ಪರಮೇಶ್ವರ್‌

ತುಮಕೂರು : ಐದು ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದೇವೆ, ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ್ದೇವೆ. ನಾವು ಖಂಡಿತವಾಗಿ 120 ಸೀಟನ್ನು ಕ್ರಾಸ್ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ.

ರಾಹುಲ್ ಗಾಂಧಿ ಒಂದು ಕಡೆ, ಬಿಜೆಪಿಯ ಅಧ್ಯಕ್ಷರು ಹಾಗೂ ಅಮಿತ್ ಷಾ ಬಂದರು. ರಾಹುಲ್ ಗಾಂಧಿ ನಾಲ್ಕು ಹಂತದಲ್ಲಿ ಪ್ರವಾಸ ಮಾಡಿದರು.ನಾವು ಏನು ಮಾಡಿದ್ದೇವೆ, ಏನು ಮಾಡುತ್ತೇವೆ ಎಂದು ಸಮರ್ಥವಾಗಿ ಹೇಳಿದರು. ಪ್ರಧಾನ ಮಂತ್ರಿಗಳ ಭರವಸೆಗಳನ್ನು ಈಡೇರಿಸಲಿಲ್ಲ ಅನ್ನೋದನ್ನು ಮಾತನಾಡಿದ್ರು.  ಅಮಿತ್ ಷಾ, ನಮ್ಮ ಸರ್ಕಾರದ ಮೇಲೆ ಅಪಾದನೆ ಮಾಡಿದರು.ಅವರ ಅಪಾದನೆಗೆ ಯಾವುದೇ ಸಾಕ್ಷ್ಯವಿಲ್ಲದೆ ಮಾತನಾಡಿದರು. ಕೆಲವೆಡೆ ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಯವಾಗಿ ಟೀಕೆ ಮಾಡಿದರು. ಇಷ್ಟೆಲ್ಲಾ ಆದರೂ ಜನ ಮಾತ್ರ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಇನ್ನೂ ಅಭಿವೃದ್ಧಿ ಮಾಡುವಂತೆ ಹೇಳುತ್ತಿದ್ದಾರೆ. ಅದನ್ನು ಮಾಡಿಯೇ ತೀರುತ್ತೇವೆ ಎಂದಿದ್ದಾರೆ.

 

ಮೊದಲು ಅಭಿವೃದ್ದಿಯಲ್ಲಿ ನಾವು 13 ಸ್ಥಾನದಲ್ಲಿದ್ದೆವು ಈಗ 1 ನೇ ಸ್ಥಾನದಲ್ಲಿದ್ದೇವೆ. ಹೂಡಿಕೆಯಲ್ಲಿ ರಾಜ್ಯ ಸರ್ಕಾರ ನಂಬರ್ 1 ಸ್ಥಾನ ಪಡೆದಿದೆ. ಇದನ್ನು ಕೇಂದ್ರ ಸರ್ಕಾರವೇ ಹೇಳಿದೆ. ನಾವು ವೈಯಕ್ತಿಕವಾಗಿ ಯಾರ ಮೇಲೂ ದಾಳಿ ಮಾಡಲಿಲ್ಲ, ಹೊಸದಾಗಿ ಚುನಾವಣೆ ಎದುರಿಸಿದ್ದೇವೆ.  ಮುಖ್ಯಮಂತ್ರಿ ಸ್ಥಾನ ಈಗ ಅಪ್ರಸ್ತುತ.ಮೆಜಾರಿಟಿ ಬಂದ ಮೇಲೆ ಸಿಎಲ್ಪಿ ಮೀಟಿಂಗ್ ನಲ್ಲಿ ಕರೆದು ಸಿಎಂ ಅಭ್ಯರ್ಥಿಯನ್ನು ನಿರ್ಧಾರ ಮಾಡುತ್ತೇವೆ. ಸಿದ್ದರಾಮಯ್ಯ ಸಿಎಂ ಆದರೆ ನನ್ನದೇನು ತಕರಾರಿಲ್ಲ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ, ಹೀಗಾಗಿ ಯಾರೊಂದಿಗೂ ಮೈತ್ರಿ ಪ್ರಶ್ನೆ ಅಪ್ರಸ್ತುತ ಎಂದು ಪರಮೇಶ್ವರ್‌ ಹೇಳಿದ್ದಾರೆ.

Leave a Reply

Your email address will not be published.