ಮತ್ತೆ ಕಿರುತೆರೆಗೆ ಬರಲಿದೆ ಜನಪ್ರಿಯ ಹಾಸ್ಯ ಧಾರಾವಾಹಿ ‘ಪಾಪ ಪಾಂಡು’

ಫೈನಲ್ ಕಟ್ ಪ್ರೊಡಕ್ಷನ್ ನಿರ್ಮಾಣದ, ಸಿಹಿ ಕಹಿ ಚಂದ್ರು ನಿರ್ದೇಶನದ ಕಿರುತೆರೆಯ ಜನಪ್ರಿಯ ಹಾಸ್ಯ ಧಾರವಾಹಿ ಪಾಪ ಪಾಂಡು ವೀಕ್ಷಕರನ್ನು ನಗಿಸಲು ಮರಳಿ ಬರುತ್ತಿದೆಯಂತೆ. ಹೌದು, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯೂ ಆಗಿದ್ದ ಸಿಹಿ ಕಹಿ ಚಂದ್ರು ಪಾಪ ಪಾಂಡು-2 ನಿರ್ಮಾಣಕ್ಕೆ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿಯಿದೆ.

ಪಾಪ ಪಾಂಡು ಧಾರಾವಾಹಿಯಲ್ಲಿ ಚಿದಾನಂದ, ಶಾಲಿನಿ, ಸಿಹಿ ಕಹಿ ಗೀತಾ ಹಾಗೂ ವಿಕ್ರಂ ಸೂರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 1014 ಎಪಿಸೋಡುಗಳನ್ನು ಪೂರ್ಣಗೊಳಿಸಿದ್ದ ಪಾಪ ಪಾಂಡು ಧಾರಾವಾಹಿ, ನಾಡಿನ ಟಿವಿ ವೀಕ್ಷಕರ ಮನ ಗೆಲ್ಲುವಲ್ಲಿ ಅತ್ಯಂತ ಯಶಸ್ವಿಯಾಗಿತ್ತು.

ನಿರ್ದೇಶಕ ಸಿಹಿ ಕಹಿ ಚಂದ್ರು ಪಾಪ ಪಾಂಡು-2 ಧಾರಾವಹಿಯ ಸ್ಕ್ರಿಪ್ಟ್ ಕೂಡ ಬರೆಯಲು ಶುರುವಿಟ್ಟುಕೊಂಡಿದ್ದಾರಂತೆ, ಇದರಲ್ಲಿಯೂ ಚಿದಾನಂದ ಹಾಗೂ ಶಾಲಿನಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Leave a Reply

Your email address will not be published.