ಮತದಾನ ಮಾಡಿದ ಸಿದ್ದರಾಮಯ್ಯ : ಭಗವಾನ್‌ ಕಬೀ ಬಿ ಹೈ, ಅಬೀ ಬಿ ಹೈ ಎಂದ್ರು ಸಿಎಂ

ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ಮಧ್ಯೆ ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ಸಿದ್ದರಾಮಯ್ಯ ಮತದಾನ ಮಾಡಿದ್ದಾರೆ. ವರುಣಾ ಕ್ಷೇತ್ರದ ವ್ಯಾಪ್ತಿಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಗೆ ತೆರಳಿದ ಸಿಎಂ ಅಲ್ಲಿನ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 82ರಲ್ಲಿ ಮತದಾನ ಮಾಡಿದರು. ಈ ವೇಳೆ  ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದರು.

ಮತದಾನಕ್ಕೂ ಮುನ್ನ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿದ್ದು, ಗೆಲುವು ನಮ್ಮದೇ. ನಾವು ಗೆದ್ದೇ ಗೆಲ್ಲುತ್ತೇವೆ. ನಾನು ಯಾವುದೇ ದೇವರುಗಳ ಪೂಜೆ ಪುನಸ್ಕಾರಗಳಿಗೆ ಹೋಗೋಲ್ಲ. ದೇವರು ಹೃದಯದಲ್ಲಿರುತ್ತಾನೆ. ಭಗವಾನ್ ಕಬಿಬಿ ಹೈ ಯೇ ಅಭಿಬಿಯೇ ಎಂದು ತಿಳಿಸಿದರು. ಮೊದಲ ಬಾರಿ ಮಗನಿಗೆ ಮತದಾನ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ಓಟು ಅಲ್ಲಿದೆ ಅದಕ್ಕೆ ಅಲ್ಲಿ ಹಾಕಲು ಹೋಗುತ್ತಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com