ಮೊದಲ ಬಾರಿಗೆ ವೋಟ್‌ ಮಾಡಿದ ಬಾರ್ಬಿ ಡಾಲ್‌ : ಡಬಲ್‌ ಖುಷಿಯಲ್ಲಿ ನಿವೇದಿತಾ

ಮೈಸೂರು : ಇಂದು ಬಿಗ್ ಬಾಸ್ ಸೀಸನ್ 5ನ ಕಾರ್ಯಕ್ರಮದ ಸ್ಪರ್ಧಿ ನಿವೇದಿತಾ ಗೌಡ ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 192ರಲ್ಲಿ ಮತ ಚಲಾವಣೆ ಮಾಡಿದ್ದಾರೆ.

ಮತಗಟ್ಟೆ ಕೇಂದ್ರಕ್ಕೆ ಪೋಷಕರ ಜೊತೆ ಹೋಗಿ ನಿವೇದಿತಾ ಗೌಡ ಮತದಾನ ಮಾಡಿದ್ದಾರೆ. ಇಂದು ನಿವೇದಿತಾ ಗೌಡ ಹುಟ್ಟಿದ ದಿನವಾಗಿದ್ದು, ಇದೇ ಮೊದಲ ಬಾರಿ ಮತದಾನ ಮಾಡಿದ್ದಾರೆ. ತಾನು ಹುಟ್ಟಿದ ದಿನದಂದೇ ಮೊದಲ ಮತದಾನ ಮಾಡಿದ್ದ ಖುಷಿಯಲ್ಲಿದ್ದು, ನಿಜಕ್ಕೂ ನನಗೆ ಸಂತೋಷವಾಗಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಅವರ ತಾಯಿ ಮತ್ತು ನಿವೇದಿತಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

Many more happy returns of the day Nivii..💛🤗 #specialfriend God bless u ☺️

A post shared by Chandan Shetty (@chandanshettyofficial) on

Leave a Reply

Your email address will not be published.

Social Media Auto Publish Powered By : XYZScripts.com