26/11 ಮುಂಬೈ ದಾಳಿ : ಪಾಕ್ ಉಗ್ರರ ಕೈವಾಡವನ್ನು ಒಪ್ಪಿಕೊಂಡ ನವಾಜ್ ಶರೀಫ್

2008 ರ ನವೆಂಬರ್ 26ರಂದು ಮುಂಬೈ ನಗರದ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ಹಿಂದೆ ಪಾಕ್ ಮೂಲದ ಉಗ್ರರ ಕೈವಾಡವಿರುವುದನ್ನು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಒಪ್ಪಿಕೊಂಡಿದ್ದಾರೆ. ಡಾನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನವಾಜ್ ಷರೀಫ್ ಇಂತಹ ಭಯೋತ್ಪಾದಕ ದಾಳಿಗಳನ್ನು ತಡೆಯಬಹುದಿತ್ತು ಎಂದಿದ್ದಾರೆ.

‘ ಪಾಕಿಸ್ತಾನ ತನ್ನ ಆಂತರಿಕ ಭಯೋತ್ಪಾದನೆಯನ್ನು ತಡೆಗಟ್ಟಲು ಸಮರ್ಥವಾಗಿ ಹೋರಾಡುತ್ತಿದೆ ಎಂಬುದನ್ನು ಜಗತ್ತಿನ ಇತರ ದೇಶಗಳಿಗೆ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ. ಈ ಕುರಿತು ಪಾಕಿಸ್ತಾನ ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ‘ ಎಂದು ನವಾಜ್ ಹೇಳಿದ್ದಾರೆ.

ಪಾಕಿಸ್ತಾನದ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ 26/11 ದಾಳಿಯನ್ನು ನಡೆಸಿದೆ ಎಂದು ಭಾರತ ಆರೋಪಿಸಿತ್ತು. ಈ ದಾಳಿಯಲ್ಲಿ 166 ಜನ ಮೃತಪಟ್ಟು ಹಲವಾರು ಜನ ಗಂಭೀರವಾಗಿ ಗಾಯಗೊಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com