ನನ್ನನ್ನು ಹತ್ಯೆಗೈಯಲು ರಾಜಕೀಯ ಪಕ್ಷಗಳು ಸಂಚು ರೂಪಿಸಿವೆ : ಮಮತಾ ಬ್ಯಾನರ್ಜಿ

‘ ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ ಎಂಬ ವಿಷಯ ತಿಳಿದಿದೆ, ನನ್ನನ್ನು ಮುಗಿಸಲು ರಾಜಕೀಯ ಪಕ್ಷವೊಂದು ಸುಪಾರಿ ಹಂತಕರಿಗೆ ಕಾಂಟ್ರ್ಯಾಕ್ಟ್ ನೀಡಿದೆ ‘ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ ತಮ್ಮನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

‘ ನನ್ನನ್ನು ಕೊಲ್ಲಲು ಸುಪಾರಿ ತೆಗೆದುಕೊಂಡಿರುವ ಹಂತಕರು ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಕೆಲವಾರು ಸಲ ಕಚೇರಿ, ಮನೆ ಹಾಗೂ ಇನ್ನಿತರ ಸ್ಥಳಗಳ ಹತ್ತಿರ ಸುಳಿದಾಡಿದ್ದಾರೆ ‘ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

‘ ಮೊದಲು ನನ್ನ ವ್ಯಕ್ತಿತ್ವದ ತೇಜೋವಧೆಯನ್ನು ಮಾಡಲು, ನಂತರ ದೈಹಿಕವಾಗಿಯೂ ನನ್ನನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ ‘ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com